Pravasi Koota Vittal

Pravasi Koota Vittal Contact information, map and directions, contact form, opening hours, services, ratings, photos, videos and announcements from Pravasi Koota Vittal, Airport, Vittal, Bantval.

07/01/2025

ಪ್ರಕಟಣೆ: ಪ್ರವಾಸಿ ಕೂಟ,ವಿಟ್ಲ

ಸೌದಿ ಅರೇಬಿಯಾದ ಜಿದ್ದಾ ಹಾಗೂ ಕೆಲವು ಕಡೆಗಳಲ್ಲಿ ಅತಿ ಶಕ್ತಿಯುತ ಮಳೆಯು ಹೆಚ್ಚಾಗಿದ್ದು ಪ್ರವಾಸಿಗರಿಗರು ಅತ್ಯಂತ ಜಾಗರೂಕತೆಯಿಂದ ಇರಬೇಕಾಗಿ ಕೇಳಿಕೊಳ್ಳುತ್ತೇವೆ.
ರಸ್ತೆಗಳಲ್ಲಿ ವಿದ್ಯುತ್ ಅಥವಾ ಇತರೆ ಯಾವುದು ಅಪಾಯಕಾರಿ ಕೆಬಲ್ ಗಳು ಮತ್ತು ರಸ್ತೆಗಳಲ್ಲಿ ಕೆಲಸಗಳ ನಿಮಿತ್ತ ತೆರೆದಿಟ್ಟ ಗುಂಡಿಗಳ ಬಗ್ಗೆ ಅನಾವಶ್ಯಕ ಸುತ್ತುವಿಕೆ‌ ಇವುಗಳ ಬಗ್ಗೆ ಎಚ್ಚರವಿರಲಿ. ವಾಹನ ಹೊಂದಿರುವ ವ್ಯಕ್ತಿಗಳು ನೀರಿನ ಮಟ್ಟ ಹರಿಯುವ ಸ್ಥಳಗಳಲ್ಲಿ ವಾಹನ ಚಲಾಯಿಸುವಾಗ ಹಾಗೂ ವಾಹನ ಪಾರ್ಕಿಂಗ್ ಮಾಡುವುವಾಗ ಎಚ್ಚರ ವಹಿಸಬೇಕು. ಮುಂದಿನ ದಿನಗಳಲ್ಲಿ ಮಳೆಯು ಸೌದಿಯ ನಾನ ಕಡೆಗಳಲ್ಲಿ ಹಾಗೂ ಪಕ್ಕದ ರಾಜ್ಯದಲ್ಲೂ ಕೂಡ ಬರುವ ಸಂದರ್ಭ ಎಚ್ಚರಿಕೆ ನೀಡಿದ್ದಾರೆ

ಅರಬ್ ರಾಷ್ಟ್ರಗಳಲ್ಲಿ ಶೈತ್ಯ ಹವಾಮಾನ( ಚಳಿಗಾಲ) ಕೂಡಿರುವ ಕಾರಣ ಪ್ರವಾಸಿಗರು ತಮ್ಮ ಕೋಣೆಯಲ್ಲಿ ಹೀಟರ್ ಚಲಾಯಿಸಿ ಮಲಗುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು. ಅತಿ ಹೆಚ್ಚು ಹೀಟರ್ ಚಲಾಯಿಸವಾಗ (ಎಲೆಕ್ಟ್ರಾನಿಕ್ ಯಂತ್ರಗಳು) ಅಗ್ನಿ ಅವಘಡ ಸಂಭವಿಸುವ ಸಂಧರ್ಭಗಳು ಜಾಸ್ತಿ ಇರುವುದರಿಂದ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.

ಪ್ರವಾಸಿಗರು ಆಯಾ ಸರ್ಕಾರಗಳು ನೀಡುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗಿ ವಿನಂತಿಸುತ್ತೇವೆ

28/12/2024

ಅಲರ್ಟ್: ವಿಮಾನ ಪ್ರಯಾಣಿಕರಿಗೆ ಅಗತ್ಯದ ಸೂಚನೆ! ಇನ್ಮುಂದೆ 1 ಬ್ಯಾಗ್ ಮಾತ್ರ ಕೊಂಡೊಯ್ಯಲು ಸಾಧ್ಯ!

ವಿಮಾನಯಾನ ಮಾಡುವವರಿಗೆ ಇದೊಂದು ವಿಶೇಷ ಸೂಚನೆ. ವಿಮಾನದಲ್ಲಿ ಪ್ರಯಾಣಿಸುವವರು ಇನ್ನು ಮುಂದೆ ಕೇವಲ 1 ಬ್ಯಾಗ್ ಮಾತ್ರ ಕ್ಯಾಬಿನ್ ಒಳಗೆ ಕೊಂಡೊಯ್ಯಬಹುದು. ಅವರು ಕೊಂಡೊಯ್ಯುವ ಬ್ಯಾಗ್ 7 ಕೆ.ಜಿ. ಮೀರಿರಬಾರದು. ಬ್ಯಾಗ್ 115 ಸೆಂ.ಮೀ.ಗಿಂತ ಹೆಚ್ಚಿರಬಾರದು ಎಂದು ನಾಗರಿಕ ವಿಮಾನ ಯಾನ ಭದ್ರತಾ ಬ್ಯೂರೋ ಬಿಸಿಎಎಸ್ ತಿಳಿಸಿದೆ. ಈ ನಿಯಮ ಮೇ 2ಕ್ಕಿಂತ ಮೊದಲ ಟಿಕೆಟ್ ಬುಕ್ ಮಾಡಿದವರಿಗೆ ಅನ್ವಯಿಸುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಏರುತ್ತಿರುವ ಹಿನ್ನೆಲೆ ಬಿಸಿಎಎಸ್ ಮತ್ತು ವಿಮಾನ ನಿಲ್ದಾಣದ ಭದ್ರತೆಯ ಜವಾಬ್ದಾರಿ ಹೊಂದಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಐಎಸ್‌ಎಫ್ ಹೊಸ ಹ್ಯಾಂಡ್ ಬ್ಯಾಗೇಜ್ ನೀತಿಗೆ ಸಂಬಂಧಿಸಿದ ನಿಯಮಗಳನ್ನು ಕಠಿಣಗೊಳಿಸಿದೆ.
ಹೊಸ ಬಿಸಿಎಎಸ್ ಹ್ಯಾಂಡ್ ಬ್ಯಾಗೇಜ್ ನೀತಿಯ ಪ್ರಕಾರ ಪ್ರಯಾಣಿಕರು ಈಗ ವಿಮಾನದೊಳಗೆ ಕೇವಲ ಒಂದು ಬ್ಯಾಗ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಈ ನಿಯಮ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣಿಕರಿಗೆ ಅನ್ವಯವಾಗುತ್ತದೆ. ಇನ್ನು ಫಸ್ಟ್ ಅಥವಾ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರು 10 ಕೆ.ಜಿ. ವರೆಗೆ ಕೊಂಡೊಯ್ಯಬಹುದು.

ಮೇ 2ಕ್ಕಿಂತ ಮೊದಲು ಬುಕ್ ಮಾಡಿದ ಎಕಾನಮಿ ಪ್ರಯಾಣಿಕರು 8 ಕೆಜಿ, ಪ್ರೀಮಿಯಂ ಎಕಾನಮಿ ಪ್ರಯಾಣಿಕರು 10 ಕೆಜಿ ಮತ್ತು ಬಿಸಿನೆಸ್ ಕ್ಲಾಸ್‌ನ ಪ್ರಯಾಣಿಕರು 12 ಕೆಜಿ ತೂಕದ ಬ್ಯಾಗ್ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.

ಅನಿವಾಸಿ ಕನ್ನಡಿಗರಿಗೆ ಇಲ್ಲವೇ ಪ್ರತ್ಯೇಕ ಸಚಿವಾಲಯದ ʼಗ್ಯಾರಂಟಿʼ?
25/12/2024

ಅನಿವಾಸಿ ಕನ್ನಡಿಗರಿಗೆ ಇಲ್ಲವೇ ಪ್ರತ್ಯೇಕ ಸಚಿವಾಲಯದ ʼಗ್ಯಾರಂಟಿʼ?

ಸುಮಾರು 18 ಲಕ್ಷ ಕನ್ನಡಿಗರು ವಿಶ್ವಾದ್ಯಂತ ನೆಲೆಸಿದ್ದು, ಈ ಅನಿವಾಸಿ ಕನ್ನಡಿಗರಿಗಾಗಿ ರಾಜ್ಯ ಸರ್ಕಾರದಡಿಯಲ್ಲಿ ಪ್ರತ್ಯೇಕ ಸಚಿವಾಲಯ...

25/12/2024

Monthly Meeting with the Ambassador to address urgent consular and related issues will take place on Thursday, 2nd January 2025 from 3:00 PM onwards at the Indian Embassy, Doha. For more information, please refer the attached flyer. Diaspora India Connect Indian Community Benevolent Forum - Qatar

ಸೌದಿ ಅರೇಬಿಯಾದ ಉತ್ತರ ಗಡಿ ಭಾಗದಲ್ಲಿ ಅಪರೂಪದ ಹಾವು ಕಂಡುಬಂದಿದೆ ಸುಳ್ಳು ನಾಗರಹಾವು ( False Cobra) ಎಂದಾಗಿದೆ ಇದರ ಹೆಸರು. ಇದು ನಾಗರಹಾವಿನ...
22/12/2024

ಸೌದಿ ಅರೇಬಿಯಾದ ಉತ್ತರ ಗಡಿ ಭಾಗದಲ್ಲಿ ಅಪರೂಪದ ಹಾವು ಕಂಡುಬಂದಿದೆ ಸುಳ್ಳು ನಾಗರಹಾವು ( False Cobra) ಎಂದಾಗಿದೆ ಇದರ ಹೆಸರು. ಇದು ನಾಗರಹಾವಿನ ಜಾತಿಯಲ್ಲಿ ಪರಿಗಣಿಸುತ್ತಾರೆ. ಒಂದು ಮೀಟರ್ ಗೂ ಹೆಚ್ಚು ಉದ್ದ ಬೆಳೆಯುವ ತೆಳು ಬಣ್ಣದ ಹಾವು ವಿಷಕಾರಿಯಾಗಿದೆ (ನಾಗರ ಹಾವಿಗಿಂತ ಕಡಿಮೆ ಪ್ರಮಾಣದ ವಿಷವನ್ನು ಹೊಂದಿದೆ) . ಮತ್ತು ಇದು ಮನುಷ್ಯರಿಗೆ ಗಮನಾರ್ಹ ಅಪಾಯ ಎಂದು ಪರಿಗಣಿಸಲಾಗಿಲ್ಲ. ಹೆಚ್ಚಾಗಿ ಆಫ್ರಿಕಾ ಹಾಗೂ ಮಧ್ಯಪ್ರಾಚ್ಯ ಗಳಲ್ಲಿ ಕಂಡುಬರುವಂತಹ Opisthoglyphous ಕುಟುಂಬದಲ್ಲಿ ಕಂಡು ಬರುವ ಹಾವಿನ ಜಾತಿಯಾಗಿದೆ.

19/12/2024
ಪ್ರಕಟಣೆ: ಪ್ರವಾಸಿ ಕೂಟ ವಿಟ್ಲಆನ್ಲೈನ್ ವಂಚನಾ ಜಾಲದ ಬಗ್ಗೆ ಎಚ್ಚರವಾಗಿರಿಇತ್ತೀಚಿಗೆ ಆನ್ಲೈನ್ ವಂಚನೆಯ ಜಾಲ ವ್ಯಾಪಾಕವಾಗಿದೆ. ಫೇಸ್ಬುಕ್, ವಾಟ್...
19/12/2024

ಪ್ರಕಟಣೆ: ಪ್ರವಾಸಿ ಕೂಟ ವಿಟ್ಲ

ಆನ್ಲೈನ್ ವಂಚನಾ ಜಾಲದ ಬಗ್ಗೆ ಎಚ್ಚರವಾಗಿರಿ

ಇತ್ತೀಚಿಗೆ ಆನ್ಲೈನ್ ವಂಚನೆಯ ಜಾಲ ವ್ಯಾಪಾಕವಾಗಿದೆ. ಫೇಸ್ಬುಕ್, ವಾಟ್ಸಪ್,ಇನ್ಸ್ಟಾಗ್ರಾಮ್ ಪೇಜ್ ಗಳನ್ನು ಹ್ಯಾಕ್ ಮಾಡಿ ಹಣ ದೋಚುವ ವ್ಯವಸ್ತಿತ ಜಾಲ ಸಕ್ರಿಯವಾಗಿದೆ. ಸೌದಿ ಅರೇಬಿಯದಲ್ಲಿ ಇತ್ತೀಚಿಗೆ ಹಲವು ಸಹೋದರರು ಇಂತಹ ಜಾಲಕ್ಕೆ ಬಲಿಯಾಗಿ ಹಣ ಕಳೆದುಕೊಂಡಿದ್ದಾರೆ.

ಘಟನೆ 1
ಇತ್ತೀಚಿಗೆ ಗೆಳೆಯನೊಬ್ಬನ ಫೇಸ್ಬುಕ್ ಖಾತೆ ಹ್ಯಾಕ್ ಮಾಡಿ ಫೇಕ್ ಐ.ಡಿ ಕ್ರಿಯೇಟ್ ಮಾಡಿ ಹಲವು ಸ್ನೇಹಿತರ, ಕುಟುಂಬಸ್ಥರ ಬಳಿ ಹಣ ಕೇಳಿದ್ದು, ಹಣ ಸಿಗದೇ ಇದ್ದಾಗ ಅಶ್ಲೀಲ ಚಿತ್ರ ಹಾಗು ವಿಡಿಯೋ ಗಳನ್ನು ಎಡಿಟ್ ಮಾಡಿ ಬ್ಲಾಕ್ಮೇಲ್ ಮಾಡಿದ್ದಾರೆ. ಹಲವು ಸಹೋದರರು ಇವರ ಜಾಲದಲ್ಲಿ ಸಿಲುಕಿದ್ದಾರೆ.

ಘಟನೆ 2
ಕೆಲವು ದಿನಗಳ ಹಿಂದೆ ಕೇರಳ ಕಣ್ಣೂರ್ ಮೂಲದ ವ್ಯಕ್ತಿಗೆ ಅಪರಿಚಿತ ಕಾಲ್ ಬಂದಿತ್ತು. ಯಾವುದೋ ಬಂಪರ್ ಡ್ರಾ ದಲ್ಲಿ ತಮಗೆ 2 ಲಕ್ಷ ರಿಯಲ್ ಬಹುಮಾನ ಬಂದಿದ್ದು, ಅದನ್ನು ಪಡೆಯಲು ಒಂದು ಮೊಬೈಲ್ ನಂಬರ್ ನೀಡಿ ಅದಕ್ಕೆ 50 ರಿಯಲ್ ರಿಚಾರ್ಜ್ ಮಾಡುವಂತೆ ಕೇಳಿಕೊಂಡಿದ್ದಾರೆ. ಸಂಶಯಗೊಂಡ ಈತ ಕಾಲ್ ಕಟ್ ಮಾಡಿದ್ದಾನೆ. ಸ್ವಲ್ಪ ಸಮಯದ ಬಳಿಕ ಆತನ ವಾಟ್ಸಪ್ ನಂಬರಿಗೆ 2ಲಕ್ಷ ರಿಯಲ್ ಮೌಲ್ಯದ ಚೆಕ್ ನ ಫೋಟೋ ಕಳುಹಿಸಿದ್ದಾರೆ. ಅದರಲ್ಲಿ ಈತನ ಹೆಸರು ಪಾಸ್ಪೋರ್ಟ್ ನಲ್ಲಿರುವಂತೆ ಮುದ್ರಿತವಾಗಿತ್ತು. ಚೆಕ್ ನೋಡಿ ಈತ ಅವರ ಬಲೆಗೆ ಬಿದ್ದಿದ್ದಾನೆ. ಸಲ್ಪ ಸಮಯದ ಬಳಿಕ ಮತ್ತೊಮ್ಮೆ ಕರೆ ಮಾಡಿದ್ದಾರೆ. ಈತ 50 ರಿಯಲ್ ರಿಚಾರ್ಜ್ ಮಾಡಿದ್ದಾನೆ. ಬಳಿಕ ವಂಚಕರು ಚೆಕ್ ನೀಡುವ ಆಮಿಷ ತೋರಿಸಿ ಹಂತ ಹಂತವಾಗಿ 5000 ರಿಯಲ್ ಗಿಂತಲೂ ಅಧಿಕ ಹಣ ದೋಚಿದ್ದಾರೆ.

ಆದುದರಿಂದ ಸಾಮಾಜಿಕ ಜಾಲತಾಣ ಉಪಯೋಗಿಸುತ್ತಿರುವ ಸಹೋದರರು ಜಾಗೃತರಾಗಿರಿ. ಯಾವುದೇ ನಿರುಪಯುಕ್ತ ಲಿಂಕ್ ಅಥವಾ ಸ್ಪಾಮ್ ಕಾಲ್ ಗಳಿಂದ ಎಚ್ಚರವಾಗಿರಿ.

ಧನ್ಯವಾದಗಳು

ಮಾಹಿತಿ ಪ್ರವಾಸಿ ಕೂಟ ವಿಟ್ಲ ಕತಾರ್ (QATAR) ದಕ್ಷಿಣ ದಿಕ್ಕಿಗೆ ಸೌದಿ ಅರೇಬಿಯಾ ಹಾಗೂ ಇತರ ಎಲ್ಲಾ ಕಡೆ  ಸುತ್ತಲೂ ಕಡಲನಿಂದ ಕೂಡಿದ  ಒಂದು ಸಣ್ಣ...
17/12/2024

ಮಾಹಿತಿ ಪ್ರವಾಸಿ ಕೂಟ ವಿಟ್ಲ

ಕತಾರ್ (QATAR) ದಕ್ಷಿಣ ದಿಕ್ಕಿಗೆ ಸೌದಿ ಅರೇಬಿಯಾ ಹಾಗೂ ಇತರ ಎಲ್ಲಾ ಕಡೆ ಸುತ್ತಲೂ ಕಡಲನಿಂದ ಕೂಡಿದ ಒಂದು ಸಣ್ಣ ರಾಷ್ಟ್ರ. ಇಲ್ಲಿಯ ರಾಜಧಾನಿಯನ್ನು ದೋಹ (DOHA) ಎಂದು ಕರೆಯುತ್ತಾರೆ , ಸೆಪ್ಟೆಂಬರ್ 1971 ಸ್ವಾತಂತ್ರ್ಯ ಪಡೆಯುತ್ತದೆ . ಆಧುನಿಕ ಕಾಲದಲ್ಲಿ ಕಡಲಿನಿಂದ ಮುತ್ತುಗಳ ಶೇಖರಣೆ ಮತ್ತು ಮಾರಾಟ ಹಾಗೂ ಮೀನುಗಾರಿಕೆ ಯಾಗಿತ್ತು ಜೀವನ ಶೈಲಿ . ಇಲ್ಲಿಯ ಪ್ರಜೆಗಳನ್ನು ಕತಾರಿ ಗಳೆಂದು ಕರೆಯುತ್ತಾರೆ ಇಲ್ಲಿಯ ಜನಸಂಖ್ಯೆಯಲ್ಲಿ ಶೇಕಡಾ 80+% ವಿದೇಶಿಗರೇ ಸುಮಾರು 6 ಲಕ್ಷಕ್ಕೂ ಅಧಿಕ ಭಾರತಿಯ ಪ್ರವಾಸಿಗರನ್ನು ಹೊಂದಿರುತ್ತವೆ.
ಈ ಚಿಕ್ಕ ರಾಷ್ಟ್ರ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಕೂಡ ಒಂದು. 2022 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯು ಈ ಚಿಕ್ಕ ರಾಷ್ಟ್ರ ದಲ್ಲಿ ಬಹಳ ಯಶಸ್ವಿಯಾಗಿ ನಡೆದತ್ತು.ಇಲ್ಲಿಯ ಕರೆನ್ಸಿಯನ್ನು QATAR RIYAL ಎಂದು ಕರೆಯುತ್ತಾರೆ ಮತ್ತು ಇಲ್ಲಿಯ 1 RIYAL ಭಾರತಿಯ 23 ರೂಪಾಯಿ ಮೌಲ್ಯವನ್ನು ಹೊಂದಿವೆ.

ಪ್ರಮುಖ ಆಕರ್ಷಣೆಯ ಸ್ಥಳಗಳು :- Souq Waqif, National Museum of Qatar, Katara Cultural village,The Pearl, Education City,Msherib Down town, Lusail etc

ಅತ್ಯಂತ ಆಡಂಬರದ ಶಾಪಿಂಗ್ ಮಾಲ್ ಗಳು ಕೂಡ ಇಲ್ಲಿಯ ಪ್ರಮುಖ ಆಕರ್ಷಣೆಯ ಸ್ಥಳಗಳಲ್ಲಿ ಒಂದಾಗಿದೆ .

ಪ್ರಮುಖ ಆಕರ್ಷಣೆಯ ಕಟ್ಟಡಗಳು:- Doha tower, Aspire tower, Lusail tower,Katara tower, QNCC, Marina twin tower,etc...

ಇಲ್ಲಿಯ ಮೊಬೈಲ್ ಸಂಖ್ಯೆಯು 00974. ಅಥವಾ +974 ದಿಂದ ಪ್ರಾರಂಭವಾಗುತ್ತದೆ.

ಎಲ್ಲಾ ಅನಿವಾಸಿ ಭಾರತೀಯ ಸಹೋದರರಿಗೆ QATAR NATIONAL DAY ಶುಭಾಶಯಗಳು

ಮಾಹಿತಿ:- ಪ್ರವಾಸಿ ಕೂಟ, ವಿಟ್ಲ BAHRAIN ( ಬಹ್ರೇನ್)   ಸೌದಿ ಅರೇಬಿಯಾದ ಪಶ್ಚಿಮಕ್ಕೆ ಹಾಗೂ,ಖತಾರ್ ಗೆ ಆಗ್ನೇಯ ದಿಕ್ಕಿಗೆ ಇರುವ ಒಂದು ಚಿಕ್ಕ ...
15/12/2024

ಮಾಹಿತಿ:- ಪ್ರವಾಸಿ ಕೂಟ, ವಿಟ್ಲ

BAHRAIN ( ಬಹ್ರೇನ್)

ಸೌದಿ ಅರೇಬಿಯಾದ ಪಶ್ಚಿಮಕ್ಕೆ ಹಾಗೂ,ಖತಾರ್ ಗೆ ಆಗ್ನೇಯ ದಿಕ್ಕಿಗೆ ಇರುವ ಒಂದು ಚಿಕ್ಕ ದ್ವೀಪ ರಾಷ್ಟ್ರ ಬಹ್ರೇನ್. ಈ ಸಣ್ಣ ದ್ವೀಪ ರಾಷ್ಟ್ರಕ್ಕೆ ಮೊಟ್ಟ ಮೊದಲ ಬಾರಿಗೆ ನವೆಂಬರ್ 1986 ರಲ್ಲಿ ಸೌದಿ ಅರೇಬಿಯಾದಿಂದ ಕಡಲು ಸೇತುವೆ ( ಮಾರ್ಗ) ರಸ್ತೆಯನ್ನು ತೆರೆಯಲಾಯಿತು. ಅರಬ್ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಕಚ್ಚಾ ತೈಲ ಕಂಡು ಹಿಡಿದಿದ್ದು ಈ ಚಿಕ್ಕ ದ್ವೀಪ ರಾಷ್ಟ್ರ ದಲ್ಲಿ ಆಗಿರುತ್ತದೆ.
ಇಲ್ಲಿಯ ರಾಜಧಾನಿಯನ್ನು ಮನಾಮ (MANAMA) ಎಂದು ಕರೆಯುತ್ತಾರೆ.ಅರಬಿ ಯಾಗಿದೆ ರಾಷ್ಟ್ರೀಯ ಬಾಷೆ.
ಬಹ್ರೇನ್ ಇದೊಂದು ಅರೇಬಿಕ್ ಪದ (ಎರಡು ಕಡಲುಗಳು ).1971 August 15 ಸ್ವಾತಂತ್ರ್ಯ ಪಡೆಯುತ್ತದೆ. ಆಧುನಿಕ ಕಾಲದಲ್ಲಿ ಕಡಲಿನಿಂದ ಮುತ್ತುಗಳ ಶೇಖರಣೆ ಹಾಗೂ ಮಾರಾಟವಾಗಿತ್ತು ಇವರ ಜೀವನ ಶೈಲಿ.
ಇಲ್ಲಿಯ ಕರೆನ್ಸಿಯನ್ನು ಬಹ್ರೇನ್ ದಿನಾರ್ (BHD) ಎಂದು ಕರೆಯುತ್ತಾರೆ. (ಪ್ರಪಂಚದಲ್ಲಿಯೇ ಎರಡನೇ ಅತ್ಯಂತ ಮೌಲ್ಯವನ್ನು ಹೊಂದಿದೆ.)ಅಲ್ಲಿಯ 1 ದಿನಾರ್ ಭಾರತಿಯ 224 ರೂಪಾಯಿ ಮೌಲ್ಯವನ್ನು ಹೊಂದಿವೆ.

ಪ್ರಮುಖ ಆರ್ಥಿಕತೆ:- Oil exports, tourism, logistics, financial services..

ಪ್ರಮುಖ ಆಕರ್ಷಣೆಯ ಸ್ಥಳಗಳು:- Manama, Riffa, Juffair, Amwaj Island, Muharraq,Hawar Islands,Isa Town,Hamad Town,Zallaq,Qal'at Al Bahrain,Al Areen..

ಆಕರ್ಷಣೆಯ ಕಟ್ಟಡಗಳು:- Almoyyed Tower, Symphony Tower,Era Tower, Dual Towers, Spiral Orchid Resistance , Bharin World Trade centre,etc.....

ಇಲ್ಲಿಯ ಮೊಬೈಲ್ ಸಂಖ್ಯೆಯು. O0973. ಅಥವಾ +973. ಪ್ರಾರಂಭವಾಗುತ್ತದೆ.

ಎಲ್ಲಾ ಅನಿವಾಸಿ ಭಾರತೀಯ ಸಹೋದರರಿಗೆ BAHRAIN NATIONAL DAY. ಶುಭಾಶಯಗಳು

ಫೆ.9ರಂದು ದುಬೈನಲ್ಲಿ ನಡೆಯಲಿರುವ ಬ್ಯಾರಿ ಮೇಳಕ್ಕೆ ʼಪ್ರವಾಸಿ ಕೂಟ ವಿಟ್ಲʼ ಸಾಥ್‌ಬ್ಯಾರೀಸ್ ಚೇಂಬರ್ (BCCI) ಯುಎಇ ನೇತೃತ್ವ ದುಬೈ: ಬ್ಯಾರೀಸ್ ...
09/12/2024

ಫೆ.9ರಂದು ದುಬೈನಲ್ಲಿ ನಡೆಯಲಿರುವ ಬ್ಯಾರಿ ಮೇಳಕ್ಕೆ ʼಪ್ರವಾಸಿ ಕೂಟ ವಿಟ್ಲʼ ಸಾಥ್‌

ಬ್ಯಾರೀಸ್ ಚೇಂಬರ್ (BCCI) ಯುಎಇ ನೇತೃತ್ವ

ದುಬೈ: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಯುಎಇ ನೇತೃತ್ವದಲ್ಲಿ ಯುಎಇಯಲ್ಲಿರುವ ಎಲ್ಲಾ ಬ್ಯಾರಿ ಸಂಘಟನೆಗಳ ಸಹಯೋಗದಲ್ಲಿ 2025ರ ಫೆ.9ರಂದು ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ನಡೆಯಲಿರುವ ಅದ್ದೂರಿಯ ʼಬ್ಯಾರಿ ಮೇಳʼ ಸಿದ್ಧತೆಗೆ ʼಪ್ರವಾಸಿ ಕೂಟ ವಿಟ್ಲʼ ಸಾಥ್‌ ನೀಡಿದೆ.

ಅಜ್ಮಾನ್ ತುಂಬೆ ಮೆಡಿಸಿಟಿ ಸಭಾಂಗಣದಲ್ಲಿ ಡಿ.8ರಂದು ಜರುಗಿದ ಬ್ಯಾರಿ ಮೇಳ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಪ್ರವಾಸಿ ಕೂಟ ವಿಟ್ಲ ಇದರ ಯುಎಇ ಅಡ್ಮಿನ್‌ ಗಳು ಕೈ ಜೋಡಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಂಬೆ ಗ್ರೂಪ್ ಸ್ಥಾಪಕರು, ಅನಿವಾಸಿ ಉದ್ಯಮಿ ತುಂಬೆ ಮೊಹಿದ್ದೀನ್ ಅವರು ಬ್ಯಾರಿ ಮೇಳ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮದ ಸಿದ್ಧತೆಗೆ ಅಧಿಕೃತ ಚಾಲನೆ ನೀಡಿದರು.

ಆಯೋಜಕರ ವಿಶೇಷ ಆಹ್ವಾನದ ಮೇರೆಗೆ ʼಪ್ರವಾಸಿ ಕೂಟ ವಿಟ್ಲʼ ಅಡ್ಮಿನ್‌ ಗಳಾದ ಸತ್ತಾರ್‌ ವಿಟ್ಲ ಮೇಗಿನಪೇಟೆ, ರಫೀಕ್‌ ಕೊಳಂಬೆ ಹಾಗೂ ಶಾಕೀರ್‌ ಶೇಖ್‌ ಮಂಗಿಳಪದವು ಕಾರ್ಯಕ್ರಮದ ಸಿದ್ಧತೆಗೆ ಸಹಕರಿಸಿದರು.

- ಪ್ರವಾಸಿ ಕೂಟ ವಿಟ್ಲಆಯುಷ್ಮಾನ್ ಭಾರತ್ ಯೋಜನೆ (ABY) ಅಥವಾ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಆರೋಗ್ಯ ವಿಮಾ ಕಾರ್ಡ್.ದ್ವಿತೀಯ ಮತ್...
09/12/2024

- ಪ್ರವಾಸಿ ಕೂಟ ವಿಟ್ಲ

ಆಯುಷ್ಮಾನ್ ಭಾರತ್ ಯೋಜನೆ (ABY) ಅಥವಾ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಆರೋಗ್ಯ ವಿಮಾ ಕಾರ್ಡ್.

ದ್ವಿತೀಯ ಮತ್ತು ತೃತೀಯ ಆರೈಕೆಯ ಸೌಲಭ್ಯವನ್ನು ಹೊಂದಿರುವ ಆಸ್ಪತ್ರೆಗಳಲ್ಲಿ ವರ್ಷಕ್ಕೆ ಪ್ರತಿ ಕುಟುಂಬಕ್ಕೆ ₹5 ಲಕ್ಷದವರೆಗೆ ಆರೋಗ್ಯ ವಿಮಾ ರಕ್ಷಣೆಯನ್ನು ಆಯುಷ್ಮಾನ್ ಕಾರ್ಡ್ ಮೂಲಕ ಪಡೆಯಬಹುದು.

ಪ್ರಯೋಜನಗಳು

1. ಆರೋಗ್ಯ ವಿಮಾ ಕವರೇಜ್: ಪ್ರತಿ ಕುಟುಂಬಕ್ಕೆ ವರ್ಷಕ್ಕೆ ₹5 ಲಕ್ಷದವರೆಗೆ.
2. ನಗದು ರಹಿತ ಚಿಕಿತ್ಸೆ: ಫಲಾನುಭವಿಗಳು ಎಂಪನೆಲ್ಡ್ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು.
3. ದ್ವಿತೀಯ ಮತ್ತು ತೃತೀಯ ಆರೈಕೆ: ಮಾಧ್ಯಮಿಕ ಮತ್ತು ತೃತೀಯ ಆರೈಕೆ ಚಿಕಿತ್ಸೆಗಳಿಗೆ ಆಸ್ಪತ್ರೆಗೆ ಸೇರಿಸುವ ವೆಚ್ಚವನ್ನು ಒಳಗೊಂಡಿದೆ.
4. ಮುಂಚಿನ ರೋಗಗಳು ಆವರಿಸಲ್ಪಟ್ಟಿವೆ: ಪೂರ್ವ ಅಸ್ತಿತ್ವದಲ್ಲಿರುವ ರೋಗಗಳು ಮೊದಲ ದಿನದಿಂದ ಆವರಿಸಲ್ಪಡುತ್ತವೆ.
5. ವಯಸ್ಸಿನ ಮಿತಿ ಇಲ್ಲ: ಫಲಾನುಭವಿಗಳಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ.

ಅರ್ಹತೆ

1. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು: ಸಾಮಾಜಿಕ-ಆರ್ಥಿಕ ಜಾತಿ ಗಣತಿ (SECC) 2011 ರ ಪ್ರಕಾರ.
2. ಯಾವುದೇ ಆದಾಯ ಅಥವಾ ನಿರ್ದಿಷ್ಟ ಮಿತಿಗಿಂತ ಕಡಿಮೆ ಆದಾಯವಿಲ್ಲದ ಕುಟುಂಬಗಳು: ರಾಜ್ಯದ ಮಾರ್ಗಸೂಚಿಗಳ ಪ್ರಕಾರ.

ಅರ್ಜಿ ಸಲ್ಲಿಸುವುದು ಹೇಗೆ

1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿರಿ
2. ಅರ್ಹತೆಯನ್ನು ಪರಿಶೀಲಿಸಿ: 'ನಾನು ಅರ್ಹನೇ? ಎಂಬುದನ್ನು ಖಾತರಿ ಪಡಿಸಿಕೊಳ್ಳಿ.
3. ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ: ಅರ್ಹತೆ ಇದ್ದರೆ, ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಭರ್ತಿ ಮಾಡಿ.
4. ಅರ್ಜಿಯನ್ನು ಸಲ್ಲಿಸಿ: ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಜಿಲ್ಲಾ ಕಿಯೋಸ್ಕ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ.

ಅಗತ್ಯವಿರುವ ದಾಖಲೆಗಳು

1. ಆಧಾರ್ ಕಾರ್ಡ್: ಎಲ್ಲಾ ಕುಟುಂಬದ ಸದಸ್ಯರಿಗೆ.
2. ರೇಷನ್ ಕಾರ್ಡ್: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ.
3. SECC-2011 ಡೇಟಾ: ಅರ್ಹತೆಯ ಪರಿಶೀಲನೆಗಾಗಿ.

ಆಯುಷ್ಮಾನ್ ಕಾರ್ಡ್ ಅನ್ನು ಹೇಗೆ ಬಳಸುವುದು

1. ಎಂಪನೆಲ್ಡ್ ಆಸ್ಪತ್ರೆಯನ್ನು ಹುಡುಕಿ: PMJAY ವೆಬ್‌ಸೈಟ್‌ನಲ್ಲಿ ಹತ್ತಿರದ ಎಂಪನೆಲ್ಡ್ ಆಸ್ಪತ್ರೆಗಳಿಗಾಗಿ ಹುಡುಕಿ.
2. ಅಗತ್ಯವಿರುವ ದಾಖಲೆಗಳನ್ನು ಒಯ್ಯಿರಿ*: ಆಯುಷ್ಮಾನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಇತರ ಅಗತ್ಯ ದಾಖಲೆಗಳನ್ನು ಒಯ್ಯಿರಿ.
3. ನಗದು ರಹಿತ ಚಿಕಿತ್ಸೆ ಪಡೆಯಿರಿ: ಎಂಪನೆಲ್ಡ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಿರಿ.

ಯಾವುದೇ ಮಾಹಿತಿ ಅಥವಾ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದ್ದರೆ ಹತ್ತಿರದ ಸೇವಾ ಕೇಂದ್ರಗಳನ್ನು ಸಂಪರ್ಕಿಸಲು ಹಿಂಜರಿಯಬೇಡಿ.

ಧನ್ಯವಾದಗಳು

Address

Vittal
Bantval
574243

Website

Alerts

Be the first to know and let us send you an email when Pravasi Koota Vittal posts news and promotions. Your email address will not be used for any other purpose, and you can unsubscribe at any time.

Share

Category