24/07/2026
ಭಾರತೀಯ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮೇಳ (IITM) 26ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಪ್ರವಾಸೋದ್ಯಮದ ಭವಿಷ್ಯದ ದಿಕ್ಕನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಘೋಷಣೆಗಳು ನಡೆದವು.
ಕರ್ನಾಟಕವನ್ನು ಜಾಗತಿಕ ಮಟ್ಟದ ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಸಂಪರ್ಕ ವ್ಯವಸ್ಥೆಯ ವಿಸ್ತರಣೆ, ಸುಸ್ಥಿರ ಪ್ರವಾಸೋದ್ಯಮಕ್ಕೆ ಆದ್ಯತೆ, ಕಡಲತೀರ ಪ್ರವಾಸೋದ್ಯಮದ ಅಭಿವೃದ್ಧಿ, ಶೀಘ್ರದಲ್ಲೇ ಜಾರಿಗೆ ಬರಲಿರುವ ಕರಾವಳಿ–ಮಲೆನಾಡು ಪ್ರವಾಸೋದ್ಯಮ ನೀತಿ 2026, ಹಾಗೂ ಖಾಸಗಿ ಹೂಡಿಕೆಗೆ ಹೆಚ್ಚಿನ ಅವಕಾಶಗಳ ಕುರಿತು ಮಾನ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಕೆ. ಜೆ. ಜಾರ್ಜ್ ಅವರು ತಮ್ಮ ದೂರದೃಷ್ಟಿಯನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಶ್ರೀ ಕೆ. ಜೆ. ಜಾರ್ಜ್ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಡಾ. ರಾಮ್ ಪ್ರಸಾತ್ ಮನೋಹರ್ (IAS), ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವಪ್ರಸಾದ್ ಪಿ. ಆರ್. (IAS), ಜಂಗಲ್ ಲಾಡ್ಜಸ್ & ರಿಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಿವರಾಮ್ ಬಾಬು (IFS) ಹಾಗೂ SIHRA ಮತ್ತು ಕರ್ನಾಟಕ ಟೂರಿಸಂ ಸೊಸೈಟಿ ಅಧ್ಯಕ್ಷರಾದ ಶ್ರೀ ಕೆ. ಶ್ಯಾಮ ರಾಜು ಉಪಸ್ಥಿತರಿದ್ದರು.
ಈ ಎಲ್ಲ ಉಪಕ್ರಮಗಳು ಬ್ರ್ಯಾಂಡ್ ಕರ್ನಾಟಕವನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ, ರಾಜ್ಯದ ವೈವಿಧ್ಯಮಯ ಪ್ರವಾಸಿ ಅನುಭವಗಳನ್ನು ದೇಶ-ವಿದೇಶದ ಪ್ರವಾಸಿಗರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಪರಿಚಯಿಸುವ ದಿಟ್ಟ ಹೆಜ್ಜೆಯಾಗಿವೆ.
Here are the key moments from the inauguration of the 26th edition of the Indian International Travel Mart (IITM) in Bengaluru.
The event was inaugurated by Shri K. J. George, Hon'ble Minister for Energy & Tourism, Government of Karnataka, who shared Karnataka's vision for becoming a leading global tourism destination through enhanced connectivity, sustainable tourism, beach tourism development, the upcoming Karavali-Malnad Tourism Policy 2026, and greater opportunities for private investment.
The event was attended by Shri K. J. George, Hon'ble Minister for Energy & Tourism, Government of Karnataka along with Dr. Ram Prasath Manohar - IAS, Secretary to Government, Department of Tourism, Shri Shivaprasad P. R - IAS, Managing Director, KSTDC; Shri Sivaram Babu - IFS, Managing Director, Jungle Lodges & Resorts; and Shri K. Syama Raju - President, SIHRA & Karnataka Tourism Society.
Together, these initiatives reflect Karnataka's continued commitment to strengthening Brand Karnataka and showcasing the State's div