ಸಂಚಾರಿ ಚಾಲಕ (tours&travels)

ಸಂಚಾರಿ ಚಾಲಕ (tours&travels) Contact information, map and directions, contact form, opening hours, services, ratings, photos, videos and announcements from ಸಂಚಾರಿ ಚಾಲಕ (tours&travels), j. p. nagar, Bangalore.

ವರಾಹನಾಥ ಕಲ್ಲಹಳ್ಳಿಯ ನೀವು ನೋಡಿದ್ದೀರಾ ????? ಹೇಮಾವತಿ ನದಿಯ ತಟದಲ್ಲಿ ಭೂದೇವಿಯ ಜೊತೆ ಕುಳಿತ ವರಾಹಾವತಾರಿ !!!!!ಭೂ  ವರಾಹ ನಾಥ ಸ್ವಾಮೀ ಮೂಲ...
22/09/2021

ವರಾಹನಾಥ ಕಲ್ಲಹಳ್ಳಿಯ ನೀವು ನೋಡಿದ್ದೀರಾ ????? ಹೇಮಾವತಿ ನದಿಯ ತಟದಲ್ಲಿ ಭೂದೇವಿಯ ಜೊತೆ ಕುಳಿತ ವರಾಹಾವತಾರಿ !!!!!

ಭೂ ವರಾಹ ನಾಥ ಸ್ವಾಮೀ ಮೂಲ ವಿಗ್ರಹ.

ವರಾಹ ನಾಥ ಕಲ್ಲಹಳ್ಳಿ ಮಂಡ್ಯ ಜಿಲ್ಲೆಯ ಕೆ .ಆರ್. ಪೇಟೆ ತಾಲೂಕಿನ ಒಂದು ಪುಣ್ಯ ಕ್ಷೇತ್ರ !ಕೆ.ಆರ್. ಪೇಟೆ ಯಿಂದ ೧೮.ಕಿ.ಮಿ.,ಮೈಸೂರಿನಿಂದ ೪೩ ಕಿ.ಮಿ. ದೂರದಲ್ಲಿದೆ.ಪಶ್ಚಿಮ ದಿಂದ ಉತ್ತರಕ್ಕೆ ಸಾಗುವ ಹೇಮಾವತಿ ನದಿಯ ದಡದಲ್ಲಿ ದೇವಾಲಯ ನಿರ್ಮಾಣವಾಗಿದೆ!ದೇವಾಲಯ ಪೂರ್ವಕ್ಕೆ ಮುಖ ಮಾಡಿದ್ದು ,ಗರ್ಭ ಗಡಿಯಲ್ಲಿ ಎತ್ತರದ ಪೀಠದ ಮೇಲೆ ವರಾಹ ಸ್ವಾಮಿ ಹಾಗು ಎಡ ತೊಡೆಯ ಮೇಲೆ ಭೂದೇವಿಯು ಆಸಿನಳಾಗಿದ್ದು, ಅವಳ ಸೊಂಟವನ್ನು ವರಾಹಸ್ವಾಮಿಯು ಬಳಸಿ ವಿಶಿಷ್ಟ ಬಂಗಿಯಲ್ಲಿ ದರ್ಶನ ನೀಡುತ್ತಾನೆ!ಮೂರ್ತಿಯು ಭವ್ಯ ವಾಗಿದ್ದು ೧೫ ಅಡಿ ಎತ್ತರವಿದೆ!ಹೊರಗಿನಿಂದ ದೇವಾಲಯ ನೋಡಿದವರಿಗೆ ಇಷ್ಟು ದೊಡ್ಡ ದೇವರ ಮೂರ್ತಿ ಒಳಗಡೆ ಇದೆ ಎಂದರೆ ನಂಬಲಾರರು!ಇದನ್ನು ಭೂವರಾಹನಾಥ ಸನ್ನಿದಿ ಎಂದು ನಂಬಿರುವ ಜನರು ಭೂಮಿಗೆ ಸಂಬಂದಿಸಿದ ಕಷ್ಟಗಳು ಪರಿಹಾರ ವಾಗುತ್ತವೆ ಎಂದು ಹೇಳುತ್ತಾರೆ!ದೇವಾಲಯದ ಮುಂಭಾಗದಲ್ಲಿ ಒಂದು ಶಿಲಾಶಾಸನದ ಕಲ್ಲಿದ್ದು ದೇವಾಲಯದ ಮಾಹಿತಿ ನೀಡುತ್ತಿದೆ.೧೩೩೪ರ ಈ ಶಾಸನದ ರೀತ್ಯಾ ಮಹಾಪ್ರಧಾನ ಆದಿ ಸಿಂಗೇಯ ನಾಯಕನು ಕಲ್ಲಹಳ್ಳಿ ಗ್ರಾಮವನ್ನು ಅಗ್ರಹಾರವಾಗಿಸಿ ,ರಾಣಿ ದೇಮಲದೇವಿಯ ಹೆಸರಿನಲ್ಲಿ ದೇವಲಾಪುರ ಎಂದು ನಾಮಕರಣ ಮಾಡಿ ,ರಾಜ ಗುರು ಗುಮ್ಮಟ ದೇವನಿಗೆ ದಾನ ಮಾಡಿರುವುದಾಗಿ ತಿಳಿಸುತ್ತದೆ.ಶಾಸನದಲ್ಲಿ ಸೂರ್ಯ-ಚಂದ್ರ ,ಕಮಂಡಲ ,ದೀಪ ಮಾಲೆ ಕಂಬ ಅರ್ದ ಮಾನವ ಹಾಗು ಅರ್ದ ಬೇರುಂಡ ಪಕ್ಷಿ ಕೆತ್ತನೆಯಿದ್ದು ,ಪಂಜ ಮೇಲೆತ್ತಿ ಗರ್ಜಿಸಿರುವ ಹುಲಿಯ ಕೆತ್ತನೆ ಅದ್ಭುತವಾಗಿದೆ.ಬಂದವರು ಜೊತೆಯಲ್ಲಿ ಊಟ ತಿಂಡಿ ಯನ್ನು ತರುವುದು ಒಳ್ಳೆಯದು ! ಇಲ್ಲಿ ತಿನ್ನಲು ಯಾವ ಸೌಲಬ್ಯ ಇರುವುದಿಲ್ಲ .ಮೈಸೂರಿನಿಂದ ಒಂದು ಸರ್ಕಾರಿ ಬಸ್ಸು ಬೆಳಿಗ್ಗೆ ೭ ಗಂಟೆಗೆ ಹೊರಡುತ್ತದೆ .ಸ್ವಂತ ವಾಹನ ಇದ್ದಲ್ಲಿ ಇನ್ನು ಸುತ್ತ ಮುತ್ತ ಕೆಲವು ಪ್ರದೇಶ ನೋಡಬಹುದು!ಒಮ್ಮೆ ಪ್ರಯತ್ನಿಸಿ ಸಂತೋಷ ಹೊಂದಿರಿ.

ಹಾಗೆ ಪಕ್ಷಿ ವೀಕ್ಷಕರಿಗೆ ಸಿಹಿ ಸುದ್ದಿ ಇಲ್ಲೇ ಪಕ್ಕದಲ್ಲೇ ಹರಿಯುವ ಹೇಮಾವತಿ ನದಿಯ ದಂಡೆಯಲ್ಲಿ ನಿಮಗೆ ಹಲವಾರು ಬಗೆಯ ನೀರು ಹಕ್ಕಿಗಳು, ಪಕ್ಕದ ಹಸಿರಿನ ಗದ್ದೆಗಳಲ್ಲಿ ಬಗೆ ಬಗೆಯ ಹಲವಾರು ಜಾತಿಯ ಹಕ್ಕಿಗಳನ್ನು ಕಾಣಬಹುದು . ಇಲ್ಲಿಗೆ ತಲುಪಲು ಬೆಂಗಳೂರಿನಿಂದ ಮಂಡ್ಯ , ಶ್ರೀ ರಂಗಪಟ್ಟಣದ ಸಮೀಪ ಕಿರಂಗೂರ್ ಗೇಟ್ ಬಳಿ ಬಲಕ್ಕೆ ತಿರುಗಿ ಕೆ.ಆರ್.ಪೇಟೆ ರಸ್ತೆಯಲ್ಲಿ ಸಾಗಿ ಪಾಂಡವಪುರ ರೈಲ್ವೆ ನಿಲ್ದಾಣ, ಚಿನಕುರುಳಿ, ಭೂಕನಕೆರೆ , ಅಲ್ಲಿಂದ ಗಂಜಿಗೆರೆ , ಅಲ್ಲಿಂದ ನಾಲ್ಕು ಕಿ.ಮಿ.ಕ್ರಮಿಸಿದರೆ ನಿಮಗೆ ವರಾಹನಾಥ ಕಲ್ಲಹಳ್ಳಿ ಸಿಗುತ್ತದೆ. ಇದು ಹತ್ತಿರದ ದಾರಿಯೂ ಸಹ ಹೌದು. ಭೂ ವಿವಾಧಗಳಿಗೆ ಸಂಭಂದಿಸಿದಂತೆ ಇಲ್ಲಿ ಪರಿಹಾರ ಪಡೆಯಲು ಬಹಳಷ್ಟು ಜನ ಇಲ್ಲಿಗೆ ಬರುತ್ತಾರೆ. ಅದಕ್ಕಾಗೆ ಈ ದೇವರನ್ನು ಭೂ ವರಾಹನಾಥ ಸ್ವಾಮೀ ಎಂದು ಕರೆಯುವುದಾಗಿ ತಿಳಿದು ಬರುತ್ತದೆ.ಇಲ್ಲಿಗೆ ಸಮೀಪದಲ್ಲೇ ಹಲವಾರು ಕಣ್ಣಿಗೆ ಕಾಣದ ಉತ್ತಮ ಪ್ರವಾಸಿ ತಾಣವಾಗಲು ಅರ್ಹತೆ ಉಳ್ಳ ತಾಣ ಗಳಿವೆ ಅವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಬರೆಯುತ್ತೇನೆ. ನೀವೂ ಒಮ್ಮೆ ಕುಟುಂಬದೊಡನೆ ಹೋಗಿಬನ್ನಿ ಇಲ್ಲಿನ ಪ್ರಶಾಂತ ವಾತಾವರಣ ನಿಮಗೆ ಮುದನೀಡುತ್ತದೆ.

❤️
26/10/2020

❤️

ಕಾಂಕ್ರೇಜ್ (ಗೋವಿನ ತಳಿ)

ಗುಜರಾತ್ನ ಕಛ್ ಹಾಗು ರಾಜಸ್ಥಾನದ ಜೋಧಪುರ ಪ್ರಾಂತ್ಯ ಇವುಗಳ ತವರೂರು. ಭಾರತದ ಮೂಲ ತಳಿಗಳಲ್ಲಿ ಕಾಂಕ್ರೇಜ್ ಕೂಡ ಒಂದು. ಶಿಲಾಯುಗದ ಕೆತ್ತನೆಗಳಲ್ಲಿ, ಹರಪ್ಪ ಶಿಲ್ಪಗಳಲ್ಲಿ ಕಾಣಸಿಗುವ ಗೋವಿನ ಚಿತ್ರ ಕಾಂಕ್ರೇಜ್‍ನದೇ ಎಂಬುದಕ್ಕೆ ಅಧಾರಗಳಿವೆ. ಈ ತಳಿಯ ಗೋವುಗಳನ್ನು ಕೆಲಸಗಾರ ತಳಿಯಾಗಿಯೂ ಹಾಲಿನ ತಳಿಯಾಗಿಯೂ (ಉಭಯ) ಬಳಸಬಹುದೆನ್ನುತ್ತಾರೆ.

ಕಾಂಕ್ರೇಜ್ ತಳಿಯ ಗೋವುಗಳು ಬೃಹದಾಕಾರವಾದರೂ ಅತ್ಯಂತ ಶಾಂತ ಸ್ವಭಾವದವು. ಸಾಮಾನ್ಯವಾಗಿ ಬೂದು, ಅಪರೂಪಕ್ಕೆ ನಸುಕಪ್ಪು ಬಣ್ಣದ ಇವುಗಳು ಉಬ್ಬಿದಂತಿರುವ ಸಣ್ಣ ಮೂಗು, ನೀಳವಾದ ನೇತಾಡುವ ಕಿವಿ, ಗಟ್ಟಿಯಾದ ನಿಡಿದಾದ ಕೊಂಬನ್ನು ಹೊಂದಿರುತ್ತವೆ. ಹೋರಿಗಳು ಭುಜ, ತೊಡೆ ಮತ್ತು ಕಾಲುಗಳಲ್ಲಿ ಕಪ್ಪು ಬಣ್ಣ ಹೊಂದಿರುವುದು ವಿಶೇಷ.
ಕೃಪೆ:-ವಿಕಿ

13/10/2020

ಕನ್ನಡ ಭಕ್ತಿ ಭಾವಾಮೃತ ಲೈಕ್ ಮಾಡಿ ಶೇರ್ ಮಾಡಿ

ಕಬ್ಬಾಳಮ್ಮ ದೇವಿ  (ಕಬ್ಬಾಳು)  ರಾಮನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಬ್ಬಾಳು ಬೆಟ್ಟ (ಕಬ್ಬಾಳಮ್ಮ ದೇವಾಲಯ) ಕನಕಪುರದಿಂದ 10 ಕಿ.ಮೀ. ...
23/09/2020

ಕಬ್ಬಾಳಮ್ಮ ದೇವಿ (ಕಬ್ಬಾಳು)

ರಾಮನಗರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಬ್ಬಾಳು ಬೆಟ್ಟ (ಕಬ್ಬಾಳಮ್ಮ ದೇವಾಲಯ) ಕನಕಪುರದಿಂದ 10 ಕಿ.ಮೀ. ದೂರದಲ್ಲಿದೆ.

ಕಬ್ಬಾಳು ಹಳ್ಳಿಯ ಕಬ್ಬಾಳಮ್ಮ ದೇವಿಯ ಮನೆಯಾಗಿದೆ ದೇವಿಯು ಈ ಹಳ್ಳಿಗೆ ಬರುವ ಬಗ್ಗೆ ಒಂದು ಕಲ್ಪಿತವಾದ ಕಥೆಯಿದೆ ಈ ಹಳ್ಳಿಗೆ ಬರುವ ಮೊದಲು ದೇವಿಯು ತಮಿಳುನಾಡಿನಲ್ಲಿದ್ದು ನೆಲೆಸಲು ಸ್ಥಳವನ್ನು ಹುಡುಕುತಿದ್ದಳು. ಈ ರೀತಿಯಾಗಿ ಕಬ್ಬಾಳಮ್ಮ ತನ್ನ ತಾಯಿಯಾದ ಬೈರಮ್ಮ ಸಹೋದರಿ ಬಿಸಿಲಮ್ಮ ಹಾಗೂ ಸಹೋದರ ಬೈರವೇಶ್ವರನ ಜೊತೆ ಸ್ಥಳದಿಂದ ಸ್ಥಳಕ್ಕೆ ಸಂಚರಿಸುತಿದ್ದಳು. ಈ ರೀತಿಯಾಗಿ ಸಂಚರಿಸುತ್ತಿದ್ದಾಗ ಜೋರಾಗಿ ಮಳೆ ಬಂದ ಕಾರಣ ಕಬ್ಬಾಳು ಹತ್ತಿರದ ಹಟ್ಟಿ ಹಳ್ಳಿಯಲ್ಲಿರುವ ಅಡುಕೆ ತೋಟದಲ್ಲಿ ಹೋದರು. ಈ ಸಂದರ್ಭದಲ್ಲಿ ಕಬ್ಬಾಳಮ್ಮ ತನ್ನ ತಾಯಿ,ಸಹೋದರಿ ಹಾಗೂ ಸಹೋದರನಿಗೆ ಸುರಕ್ಷಿತ ಸ್ಥಳವನ್ನು ಸೇರಲು ಹೇಳಿ ತಾನು ಅಡಿಕೆ ಮರದ ಹೊಂಬಾಳೆಯಲ್ಲಿ ಸೇರಿಕೊಳ್ಳುತ್ತಾಳೆ.ಮಳೆ ನಿಂತ ಮೇಲೆ ಹೊಂಬಾಳೆಯಿಂದ ಹೊರ ಬಂದು ಕಬ್ಬಾಳಿನ ಕಡೆಗೆ ಸಂಚರಿಸುತ್ತಾಳೆ ಅಲ್ಲಿ ಗ್ರಾಮ ದೇವತೆಗಳಾದ ಕೋಣದ ಮಾರಮ್ಮ ಮತ್ತು ಮಂತಿನ ಮಾರಮ್ಮನ ಅನುಮತಿ ಪಡೆದು ಈ ಸ್ಥಳದಲ್ಲಿ ನೆಲೆಸುತ್ತಾಳೆ.

ಗ್ರಾಮ ದೇವತೆಗಳು ಅನುಮತಿ ನೀಡಿದರೂ ಸಹ ಅಲ್ಲಿನ ಇನ್ನೊಂದು ಸ್ಥಳೀಯ ದೇವರು ಈ ದೇವಿ ಹೊರಗಿನವಳೆಂದು ಅಡ್ಡಿ ಮಾಡಿದರು. ಆದರೆ ಬಸವೇಶ್ವರ ದೇವರು ಪ್ರಥಮ ಆದ್ಯತೆಯನ್ನು ಸ್ಥಳೀಯ ದೇವತೆಗಳಿಗೆ ಕೊಡಲಾಗುವುದೆಂದು ಹೇಳಿ ಈ ದೇವರನ್ನು ಓಲೈಸಿ ದೇವಿಯನ್ನು ನೆಲೆಸಲು ಇಲ್ಲಿ ಅನುಮತಿ ಕೊಟ್ಟರು. ಅಂದಿನಿಂದ ದೇವಿಯು ಕಬ್ಬಾಳು ಹಳ್ಳಿಯಲ್ಲಿ ನೆಲೆಸಿ "ಕಬ್ಬಾಳಮ್ಮ" ಎಂಬ ಹೆಸರಿನಿಂದ ಹೆಸರುವಾಸಿಯಾದಳು. ಈಗ ಈ ಸ್ಥಳವು ಒಂದು ಪುಣ್ಯಕ್ಷೇತ್ರವಾಗಿದೆ.

ಇಲ್ಲಿ ಎರಡು ಅಗ್ನಿಕುಂಡ ಆಚರಣೆಯನ್ನು ನಡೆಸಲಾಗುತ್ತದೆ. ಒಂದು ದೀಪಾವಳಿಯ ಸಮಯದಲ್ಲಿ ಮತ್ತೊಂದು ಕಾರ್ತೀಕ ಪೂಜೆ ಉತ್ಸವದಲ್ಲಿ ಆಚರಿಸಲಾಗುತ್ತದೆ. ಈ ಎರಡು ಸಂದರ್ಭದಲ್ಲೂ ಅಗ್ನಿಕುಂಡದ ಪೂಜೆಯನ್ನು ಮೊದಲಿಗೆ ಬಸವೇಶ್ವರ ದೇವರಿಗೆ ನೆರವೇರಿಸಲಾಗುತ್ತದೆ. ನಂತರ ಕಬ್ಬಾಳಮ್ಮ ದೇವಿಗೆ ನೆರವೇರುವುದು. ದೇವಸ್ಥಾನದಲ್ಲಿ ಇತರ ಉತ್ಸವಗಳೆಂದರೆ ಶಿವರಾತ್ರಿ ಉತ್ಸವ ಹಾಗೂ ರಥೋತ್ಸವ. ಶಿವರಾತ್ರಿಯಂದು ದೊಡ್ಡ ಪ್ರಮಾಣದ ಜಾನುವಾರುಗಳ ಜಾತ್ರೆ ನಡೆಯುತ್ತದೆ.

ಕಬ್ಬಾಳಮ್ಮ ದೇವಿಯ ಜೊತೆಗಿದ್ದ ದೇವತೆಗಳು ಹತ್ತಿರದ ಸ್ಥಳಗಳಲ್ಲಿ ನೆಲೆಸಿದ್ದಾರೆ. ಸಹೋದರಿ ಬಿಸಿಲಮ್ಮ ಹುಣಸೆಹಳ್ಳಿಯಲ್ಲಿ ನೆಲೆಸಿದ್ದಾಳೆ. ತಾಯಿ ಬೈರಮ್ಮ ದೇವಸ್ಥಾನ ಹಳ್ಳಿಯ ದ್ವಾರದಿಂದ 0.5 ಕಿ ಮೀ ದೂರದಲ್ಲಿದೆ.

ನಂದೀಶ ಬಿ.ಎಮ್
ಸಂಚಾರಿ ಚಾಲಕ ಟೂರ್ಸ್ ಅಂಡ್ ಟ್ರಾವೆಲ್ಸ್
ಸಂಪರ್ಕಿಸಿ:9449202990
ಬೆಂಗಳೂರು

ಸಮಸ್ತ ಕನ್ನಡನಾಡಿನ ಜನತೆಗೆ ಮತ್ತು ನಿಮ್ಮ ಕುಟುಂಬವರ್ಗದವರೆಲ್ಲರಿಗು ಹೊಸ ವರ್ಷದ ಹಾರ್ದಿಕ ಶುಭಾಶಯಗಳು.ನಿಮಗೆಲ್ಲಾ ಈ ವರ್ಷದ ಮೊದಲ ದಿನ ಎಷ್ಟು ಸ...
01/01/2020

ಸಮಸ್ತ ಕನ್ನಡನಾಡಿನ ಜನತೆಗೆ ಮತ್ತು ನಿಮ್ಮ ಕುಟುಂಬವರ್ಗದವರೆಲ್ಲರಿಗು ಹೊಸ ವರ್ಷದ ಹಾರ್ದಿಕ ಶುಭಾಶಯಗಳು.ನಿಮಗೆಲ್ಲಾ ಈ ವರ್ಷದ ಮೊದಲ ದಿನ ಎಷ್ಟು ಸಂಭ್ರಮ ಸಿಕ್ಕಿದಿಯೊ ಆ ಸಂಭ್ರಮ,ಸಂತೋಷ ಪ್ರತಿದಿನ,ಪ್ರತಿನಿಮಿಸ ಸಿಗಲಿ ಎಂದು ಹಾರೈಸುತ್ತೇನೆ.

ಶುಭ ಕೋರುವ ನಿಮ್ಮ ಇತೈಸಿ:
@ಸಂಚಾರಿ ನಂದೀಶ ಬಿ ಎಮ್

13/09/2018

ಸಮಸ್ತ ಕರುನಾಡ ಜನರಿಗೆ ಗೌರಿ ಗಣೇಶ ಹಬ್ಬದ ಶುಭಾಷಯಗಳು
ನಮ್ಮ ಸಂಚಾರಿ ಚಾಲಕ ಟೂರ್ಸ್ ಅಂಡ್ ಟ್ರಾವೆಲ್ಸ್ ನ ಸದಸ್ಯರಿಗು ಮತ್ತು ಅವರ ಕುಟುಂಬದವರಿಗು ನಮ್ಮ ಸಂಘದ ವತಿಯಿಂದ ಶುಭಾಷಯಗಳು

20/03/2018

Bendru Theertha is a natural hot water spring in South India. It is located at a distance of about 15 kilometres from Puttur town in the Dakshina Kannada. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿ ಬೆಂದ್ರು ತೀ...

01/03/2018

ನಮಸ್ತೆ,
ಸಂಚಾರಿ ಚಾಲಕ (tours&travels) ನ ಕಡೆಯಿಂದ ಎಲ್ಲಾ ಸದಸ್ಯರಿಗು ರಂಗು ರಂಗಿನ ಬಣ್ಣ ಬಣ್ಣ ಹಬ್ಬದ ಶುಭಾಶಯಗಳು.

ಸಂಚಾರಿ ಚಾಲಕ (tours&travels) ಪೇಜ್ ನ  ಎಲ್ಲಾ ಸದಸ್ಯರಿಗು ಮತ್ತು ಅವರ ಕುಟುಂಬದವರಿಗು ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು.ನಿಮ್ಮೆಲ್ಲರಿಗು...
24/08/2017

ಸಂಚಾರಿ ಚಾಲಕ (tours&travels) ಪೇಜ್ ನ ಎಲ್ಲಾ ಸದಸ್ಯರಿಗು ಮತ್ತು ಅವರ ಕುಟುಂಬದವರಿಗು ಗೌರಿ ಮತ್ತು ಗಣೇಶ ಹಬ್ಬದ ಶುಭಾಶಯಗಳು.ನಿಮ್ಮೆಲ್ಲರಿಗು ಆ ಗಣಪ ಆಯಸ್ಸು,ಆರೋಗ್ಯ,ಸಕಲ ಸಂಪತ್ತನ್ನು ಕೊಟ್ಟು ಕಾಪಾಡಲಿ ಎಂದು ಶುಭಹಾರೈಸಲಿ...

ಭೇತಾಳ ವಾಲಾಡುತ್ತಿದ್ದ ಮರ ನಮ್ಮ ಭಾರತದಲ್ಲಿ ಎಲ್ಲಿ ಇದೆ ಗೊತ್ತಾ?  ಚಿಕ್ಕ ವಯಸ್ಸಿನಿಂದಲೂ ಹಲವಾರು ಕಥೆಗಳನ್ನು ಕೇಳಿದ್ದೇವೆ. ಅದರಲ್ಲಿ ಅತ್ಯಂತ ...
21/06/2017

ಭೇತಾಳ ವಾಲಾಡುತ್ತಿದ್ದ ಮರ ನಮ್ಮ ಭಾರತದಲ್ಲಿ ಎಲ್ಲಿ ಇದೆ ಗೊತ್ತಾ?

ಚಿಕ್ಕ ವಯಸ್ಸಿನಿಂದಲೂ ಹಲವಾರು ಕಥೆಗಳನ್ನು ಕೇಳಿದ್ದೇವೆ. ಅದರಲ್ಲಿ ಅತ್ಯಂತ ಇಷ್ಟವಾಗುವ ಕಥೆ ಎಂದರೆ ಭೇತಾಳನ ಕಥೆಗಳು. ಈತನ ಕಥೆಗಳು ಅತ್ಯಂತ ರೋಚಕವಾಗಿರುತ್ತದೆ. ನಮ್ಮ ಅಜ್ಜಿ ಭೇತಾಳನ ಕಥೆಯನ್ನು ಅತ್ಯಂತ ಸೊಗಸಾಗಿ ಹೇಳುತ್ತಿದ್ದರು. ಅದರಲ್ಲೂ ಭೇತಾಳನ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಪರಾಕ್ರಮಶಾಲಿ ವಿಕ್ರಮಾರ್ಕ ರಾಜನ ಉತ್ತರಗಳಂತೂ ಮನದಲ್ಲಿ ಅಚ್ಚಳಿಸಿದೆ. ಎಲ್ಲರಿಗೂ ತಿಳಿದ ಹಾಗೆ ಭೇತಾಳ ಹಾಗೂ ವಿಕ್ರಮಾರ್ಕ ಮಹಾರಾಜನ ನಡುವೆ ನಡೆಯುವ ಹಲವಾರು ಪ್ರಶ್ನೋತ್ತರಗಳು ಊಹಿಸಲು ಸಾಧ್ಯವಾಗದಂತಹ ಉತ್ತರಗಳನ್ನು ವಿಕ್ರಮಾರ್ಕನಿಂದ ತಿಳಿಯಬಹುದು. ಅಸಲಿಗೆ ಭೇತಾಳ ಯಾರು?. ಭೇತಾಳನು ಯಾವಾಗಲೂ ಮರದ ಮೇಲೆ ತಲೆ ಕೆಳಗೆ ಮಾಡಿ ವಾಲುಡುತ್ತಿದ್ದ ಮರವಾದರೂ ಯಾವುದು? ಎಂದು ಒಮ್ಮೆಯಾದರು ಸಹಜವಾಗಿ ಯೋಚಿಸಿರುತ್ತೀರ. ಹಾಗಾದರೆ ಗೋಣ್ಯಾಡ್ಯು ಸಂಸ್ಕøತದಲ್ಲಿ ರಚಿಸಿದ ಬೃಹತ್ ಕಥ ಭೇತಾಳನ ಕಥೆಯಲ್ಲಿ ಭೇತಾಳ ವಾಲಾಡುತ್ತಿದ್ದ ಮರದ ಬಗ್ಗೆ ವಿಸ್ತಾರವಾಗಿ ಹೇಳಿದ್ದಾನೆ. ಪ್ರಸ್ತುತ ಲೇಖನದ ಮೂಲಕ ಭೇತಾಳನ ಮರದ ಬಗ್ಗೆ ತಿಳಿಯೋಣ.

1.ವಿಕ್ರಮಾರ್ಕ ಈ ವಿಕ್ರಮಾರ್ಕ ರಾಜ ಗೋದಾವರಿ ನದಿ ತೀರದಲ್ಲಿದ್ದ ಒಂದು ಸಾಮ್ರಾಜ್ಯಕ್ಕೆ ರಾಜನಾಗಿದ್ದ. ಒಬ್ಬ ಭೀಕ್ಷುವು ದಿನವೂ ಒಂದು ಹಣ್ಣಿನ ಒಳಗೆ ರತ್ನವನ್ನು ಉಡುಗೊರೆಯಾಗಿ ವಿಕ್ರಮಾರ್ಕನಿಗೆ ನೀಡುತ್ತಿದ್ದನು. ಈ ವಿಷಯವು ವಿಕ್ರಮಾರ್ಕನಿಗೆ ತಿಳಿದಿರಲಿಲ್ಲ. ಕೆಲವು ದಿನಗಳ ಬಳಿಕ ಹಣ್ಣಿನಲ್ಲಿ ರತ್ನವಿರುವುದು ತಿಳಿಯಿತು.

ರತ್ನವನ್ನು ಕಂಡು ಭೀಕ್ಷುವಿನ ಬಳಿ ವಿನಯದಿಂದ ನಿಮ್ಮ ಈ ವಿಶ್ವಾಸಕ್ಕೆ ಮೆಚ್ಚಿದ್ದೇನೆ. ರತ್ನವನ್ನು ನೀಡುತ್ತಿದ್ದ ಕಾರಣವನ್ನು ಹೇಳುವವರೆಗೂ ಎಂದಿಗೂ ಹಣ್ಣನ್ನು ಮತ್ತೆ ಸ್ವೀಕರಿಸುವುದಿಲ್ಲ ಎಂದು ನುಡಿದನು.

ಭೀಕ್ಷು ಭೀಕ್ಷುವು ತಾನು ಒಂದು ಮಂತ್ರವನ್ನು ಸಾಧಿಸಬೇಕು ಹಾಗಾಗಿ ಒಂದು ವೀರನ ಸಾಹಯ ಬೇಕಾಗಿದೆ ಅದ್ದರಿಂದ ನಿಮ್ಮ ಹತ್ತಿರ ಬಂದೆ ಎಂದು ವಿಕ್ರಮಾರ್ಕನಿಗೆ ತಿಳಿಸುತ್ತಾನೆ.
ಭೀಕ್ಷುವಿನ ವಿಶ್ವಾಸಕ್ಕೆ ವಿಕ್ರಮಾರ್ಜುನ ಒಪ್ಪಿಗೆ ಸೂಚಿಸುತ್ತಾನೆ. ಮುಂದೆ ಬರುವ ಕೃಷ್ಣ ಚರ್ತುದಶಿಯ ರಾತ್ರಿ ಮಹಾ ಸ್ಮಶಾನಕ್ಕೆ ಬರಲು ಭೀಕ್ಷುವು ತಿಳಿಸುತ್ತಾನೆ. ವಿಕ್ರಮಾರ್ಕ ಕೂಡ ಕೃಷ್ಣ ಚರ್ತುದಶಿಯಂದು ತೆರಳುತ್ತಾನೆ.

ಶಿಷುಂಭಾ ಮರ ವಿಕ್ರಮಾರ್ಕನಿಗೆ ಶಿಷುಂಭಾ ಮರದ ಮೇಲಿರುವ ಪುರುಷನ ಶವವನ್ನು ತಂದು ಒಪ್ಪಿಸುವಂತೆ ತಿಳಿಸುತ್ತಾನೆ. ಇದಕ್ಕೆ ಒಪ್ಪಿದ ವಿಕ್ರಮಾರ್ಕ ಶಿಷುಂಭಾ ಮರದ ಮೇಲಿನ ಪುರುಷನ ಶವವನ್ನು ತೆಗೆದುಕೊಳ್ಳಲು ಮುಂದಾಗುತ್ತಾನೆ. ಆಗ ಮರದ ಮೇಲಿದ್ದ ಶವವನ್ನು ಕೆಳಗೆ ಇಳಿಸುತ್ತಾನೆ. ಆ ಶವವು ವಿಕ್ರಮಾರ್ಕನ ಬೆನ್ನ ಮೇಲೆ ಎರಗುತ್ತಾನೆ.

ಭೇತಾಳ ವಿಕ್ರಮಾರ್ಕನು ಭೇತಾಳನನ್ನು ಕಂಡು ಯಾವುದೇ ರೀತಿಯಲ್ಲಿ ಭಯಪಡದೇ ಇರುವುದನ್ನು ಕಂಡು ಭೇತಾಳನಿಗೆ ಆಶ್ಚರ್ಯವಾಗುತ್ತದೆ. ವಿಕ್ರಮಾರ್ಕನ ಧೈರ್ಯ, ಪರಾಕ್ರಮವನ್ನು ಕಂಡು ತನ್ನ ಪ್ರಶ್ನೆಗಳಿಗೆಲ್ಲಾ ಸರಿಯಾದ ಉತ್ತರವನ್ನು ನೀಡಿದರೆ ಈ ಶವವನ್ನು ನಿನಗೆ ಒಪ್ಪಿಸುವೆ ಇಲ್ಲವಾದರೆ ಶಿರಛೇದನ ಮಾಡಿಬಿಡುವೆ ಎಂದು ಹೇಳುತ್ತಾನೆ

ಇದಕ್ಕೆ ಒಪ್ಪಿದ ವಿಕ್ರಮಾರ್ಕ ಭೇತಾಳನ ಹಲವಾರು ಪ್ರೆಶ್ನೆಗಳಿಗೆಲ್ಲಾ ಒಂದಾದಾಗಿ ಉತ್ತರ ನೀಡುತ್ತಾ ಮುಂದೆ ಸಾಗುತ್ತಾನೆ.

ಭೇತಾಳನ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ವಿಕ್ರಮಾರ್ಕ ನೀಡುತ್ತಾನೆ. ಇದರಿಂದ ಪರಾಕ್ರಮ ಶಾಲಿ ವಿಕ್ರಮಾರ್ಕನಿಗೆ ಆ ನೀಚ ಭೀಕ್ಷುವಿನ ಕುತಂತ್ರದ ಬಗ್ಗೆ ತಿಳಿಸುತ್ತಾನೆ.

ಶಿಷುಂಭಾ ಮರ ಯಾವುದು? ಈ ಶಿಷುಂಭಾ ಮರವು ಪೂರ್ವ ಹಾಗೂ ದಕ್ಷಿಣ ಭಾರತದಲ್ಲಿ ಅತ್ಯಂತ ಉಷ್ಣಮಯ ವಾತಾವರಣದಲ್ಲಿ ಬೆಳೆಯುವಂತಹದು. ಇದನ್ನು ಆಂಗ್ಲ ಭಾಷೆಯಲ್ಲಿ ರೋಸ್ ವುಡ್ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಬಿ.ಟಿ ಮರ ಎಂದು ಕರೆಯುತ್ತಾರೆ.

ಬಿ.ಟಿ ಮರ ಬಿ.ಟಿ ಮರದಲ್ಲಿ ಹಲವಾರು ಉಪಯೋಗಗಳಿವೆ. ಈ ಮರದಲ್ಲಿನ ಹಾಲನ್ನು ಗಾಯವನ್ನು ವಾಸಿ ಮಾಡಲು ಬಳಸುತ್ತಾರೆ. ಕುರ್ಚಿಗಳು, ಗಿಟಾರ್‍ಗಳನ್ನು ತಯಾರು ಮಾಡುತ್ತಾರೆ. ಈ ವೃಕ್ಷವು ಸುಮಾರು 40 ಮೀಟರ್‍ನಷ್ಟು ಎತ್ತರದಲ್ಲಿರುತ್ತದೆ.

Address

J. P. Nagar
Bangalore
J.P.NAGAR

Telephone

9449202990

Website

Alerts

Be the first to know and let us send you an email when ಸಂಚಾರಿ ಚಾಲಕ (tours&travels) posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸಂಚಾರಿ ಚಾಲಕ (tours&travels):

Shortcuts

Share