13/12/2021
ಹಾಸನ / ನವದೆಹಲಿ : ಸಕಲೇಶಪುರದಲ್ಲಿ ಅಂದು ಬಿದ್ದ ನೌಕಾದಳ ಹೆಲಿಕಾಪ್ಟರ್ ಪ್ರಾಣ ಪಣವಿಟ್ಟು ಅವಶೇಷ ಹುಡುಕಿಕೊಟ್ಟರೂ ಸಿಗದ ಜಮೀನು
ಮೂರು ದಶಕಗಳಿಂದ ತಪ್ಪದ ಕೂಲಿ ಕಾರ್ಮಿಕನ ಸರ್ಕಾರಿ ಕಛೇರಿಗಳ ಅಲೆದಾಟ ಮಿಗಿದೇ ಇಲ್ಲ
ಅಂದಿನ ಅಧಿಕಾರಿಗಳು ಭರವಸೆ ಕೊಟ್ಟರು ಇಲ್ಲಿನ ಅಧಿಕಾರಿಗಳು ಜಮೀನು , ಕೊಡಲು ಸತಾಯಿಸಿದ್ದು ಸಾಕು , ನೌಕರರಿಗಾಗಿ ಕಚೇರಿಗೆ ಅಲೆದಾಡಿ ಇವತ್ತು ರಿಟೈರ್ಡ್ ಆಗೋ ವಯಸ್ಸಾಯಿತು . ಹೆಂಡತಿ ಅಪಘಾತದಲ್ಲಿ ಕಾಲು ಕಳೆದುಕೊಂಡಿಹಳು , ಮಗನಿಗೆ ಶುಗರ್ ಹೆಚ್ಚಾಗಿ ಕಣ್ಣಿಲ್ಲ , ಇನ್ನದರು ನನಗೆ ಸಾಯುವುದರೊಳಗೆ ಕೃಷಿಭೂಮಿ ನೀಡಿದರೆ ಜೀವನ ನಡೆಸಲು ಅನುಕೂಲವಾಗುತ್ತದೆ. –ಪುಟ್ಟಸ್ವಾಮಿಗೌಡ, 1992ರಲ್ಲಿ ಹೆಲಿಕಾಪ್ಟರ್ ಅವಶೇಷ ಹುಡುಕಿಕಕೊಟ್ಟವರು
ಹೆಲಿಕಾಪ್ಟರ್ ಬ್ಲ್ಯಾಕ್ ಬಾಕ್ಸ್ ಹುಡುಕಿಕೊಟ್ಟಿದ್ದ ಪುಟ್ಟಸ್ವಾಮಿಗೌಡರಿಗೆ 1992ರಲ್ಲಿ ಅಂದಿನ ಉಪವಿಭಾಗಾಧಿಕಾರಿ ಅತುಲ್ ತಿವಾರಿ 10,000₹ ಬಹುಮಾನ ವಿತರಿಸಿದ್ದರಂತೆ
ಆಗಿನ ನಡೆದ ಘಟನೆಯ ವಿವರ : 1991 ರಲ್ಲಿ ಭಾರತೀಯ ನೌಕಾದಳದ ಚಾಪರ್ ಪತನಗೊಂಡು ಮೂವರು ನೌಕಾಪಡೆಯ ಸೇನಾನಿಗಳು ಸಾವನ್ನಪ್ಪಿದ್ದರು , ಆದರೆ ಒಂದೆಡೆ ಚಾಪರ್ ಹಾಗೂ ಮೂವರು ಯೋಧರ ಬಗ್ಗೆ ಸುಳಿವೇ ಇರಲಿಲ್ಲ ., ನೌಕಾದಳ , ಸ್ಥಳೀಯ ಪೊಲೀಸ್ , ಸಾರ್ವಜನಿಕರು ಹುಡುಕಿದರು 1991 ರಲ್ಲಿ ಸಿಗದ ಬ್ಲಾಕ್ ಬಾಕ್ ಹಾಗೂ ಡಾಕ್ಯುಮೆಂಟ್ಸ್(important) ನಂತರ ಪುಟ್ಟಸ್ವಾಮಿಗೌಡರ ದೇಶಕ್ಕಾಗಿ ಸಹಾಯ ಮಾಡ ಬೇಕೆಂಬ ಮನಸ್ಥಿತಿ ಹೊಂದು , ಇನ್ನೊಂದೆಡೆ ಸರ್ಕಾರ ಘೋಷಿಸಿದ 1ಲಕ್ಷ ರೂ ಬಹುಮಾನದಿಂದ ಕುಟುಂಬ ಬದಲಾಗಬಹುದೆಂಬ ಆಕಾಂಕ್ಷೆ ಯಿಂದ
ಸಕಲೇಶಪುರ ತಾಲ್ಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯ ಅರಮನೆ ಗುಡ್ಡ ಹಾಗೂ ಮೂರ್ಕಣ್ ಬೆಟ್ಟದಲ್ಲಿ 1991ರ ಜುಲೈನಲ್ಲಿ ಪತನವಾಗಿದ್ದ ನೌಕದಳದ ಹೆಲಿಕಾಪ್ಟರ್ ಅವಶೇಷಗಳನ್ನು ಹುಡುಕಿಕೊಟ್ಟಿದ್ದ ಇದೇ ವಿಡಿಯೋದಲ್ಲಿರುವ ವನಗೂರಿನ H.R.ಪುಟ್ಟಸ್ವಾಮಿ ಗೌಡರು ಹುಡುಕಿ ಕೊಟ್ಟಿದ್ದರು , ಸ್ಥಳದಲ್ಲೇ 3 ಅಸ್ತಿ ಪಂಜರ ಸಿಕ್ಕಿರುವುದು , ಚಾಪರ್ ನ ಬಿಡ ಭಾಗಗಳು ಸಿಕ್ಕಿದ್ದರು ನೌಕಾದಳ ವಶ ಪಡಿಸಿಕೊಂಡಿತು ., ಬಹುಮಾನವಾಗಿ ಕೇಂದ್ರ ಸರ್ಕಾರ ನೀಡಬೇಕಿದ್ದ ಸರ್ಕಾರಿ ಉದ್ಯೋಗವಾಗಲೀ ಅಥವಾ ನಾಲ್ಕು ಎಕರೆ ಜಮೀನಾಗಲಿ ಮೂರು ದಶಕ ಕಳೆದರೂ ದೊರೆತಿಲ್ಲ. ಅವರ ಮನವಿಗಳು ಮೂಲೆಗುಂಪಾಗಿವೆ ಎಂಬುದು ಪುಟ್ಟಸ್ವಾಮಿಗೌಡರ ಬೇಸರ . ದೇವರು ಕೊಟ್ಟರು ಪೂಜಾರಿ ಕೊಡದಂತಾಗಿದೆ ನನ್ನ ಪರಿಸ್ಥಿತಿ ಎಂಬುದು ಅವರ ಅಳಲು
ಅಷ್ಟಕ್ಕು ಆ ಚಾಪರ್ ಮಂಗಳೂರಿನಿಂದ ಪಯಣ ಆರಂಭಿಸಿ ಪತನಗೊಂಡಿದ್ದ ಹೆಲಿಕಾಪ್ಟರ್ನಲ್ಲಿದ್ದ ಕರ್ನಲ್ ಸೇರಿ ನಾಲ್ವರು ಮೃತಪಟ್ಟಿದ್ದರಂತೆ. ನಂತರ, ವಾಯುಪಡೆ ಹಾಗೂ ನೌಕಾಪಡೆಯ ಹೆಲಿಕಾಪ್ಟರ್ಗಳಲ್ಲಿ 45 ಯೋಧರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ ಅದೃಷ್ಟವಶಾತ್ ಇವರಿಗೆ ಸಿಕ್ಕಿದ್ದು ಇವರ ಪರಿಶ್ರಮಕ್ಕೆ ದೊರಕಬೇಕಿದ್ದು 10,000₹ ಕಡಿಮೆನೇ ಅಲ್ಲವೇ...
" ಹೆಲಿಕಾಪ್ಟರ್ ಅವಶೇಷ ಹುಡುಕಿದಾಗ ಇವರಿಗೆ 33 ವರ್ಷ , ಇದೀಗ ಮುದುಕನಾಗಿಬಿಟ್ಟೆ ಎಂದರು
ಸಕಲೇಶಪುರದ ಅಂದಿನ ಉಪವಿಭಾಗಾಧಿಕಾರಿ ಅತುಲ್ ಕುಮಾರ್ ತಿವಾರಿ ಅವರಿಗೆ ₹10 ಸಾವಿರ ಬಹುಮಾನವನ್ನು ನೀಡಿದ್ದು. ಸರ್ಕಾರದಿಂದ ನಾಲ್ಕು ಎಕರೆ ಕೃಷಿ ಭೂಮಿ ಅಥವಾ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಗಿನ ಜಿಲ್ಲಾಡಳಿತವೂ ಭರವಸೆ ನೀಡಿತ್ತಾದರೂ , ಇವತ್ತಿಗೂ ಇವರ ಪಾಲಿಗೆ ಸಿಕ್ಕಿಲ್ಲ
ಸಿಕ್ಕಿದ ಸೇನೆಯ ಕಡತಗಳನ್ನು ಅಧಿಕಾರಿಗಳಿಗೆ ತಲುಪಿಸಿದ ಗೌರವ ಇದೆ , ಅಂದು ಸನ್ಮಾನ ಮಾಡಿದ್ದು ಖುಷಿ ಇದೆ , ಅದರೆ ನನಗೆ ಅಂದು ಆಸೆ ಹುಟ್ಟಿಸಿ ಕೃಷಿ ಜಮೀನಾಗಲಿ, ಸರ್ಕಾರಿ ಉದ್ಯೋಗವಾಗಲೀ ಸಿಕ್ಕಿಲ್ಲ . ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇನೆ ಕೂಲಿ ಮಾಡಿಯೇ ಸಾಯಬೇಕೆಂದಿದ್ದರೆ ನನ್ನ ಅಲೆದಾಟಕ್ಕೆ ಬೆಲೆಸಿಗದೇ ನನ್ನ ಜೀವನ ಸಾರ್ಥಕತೆ ಸಿಗೋದಿಲ್ಲ ಅಂತಾರೆ ಪುಟ್ಟಸ್ವಾಮಿ
ಸದ್ಯ, ಇವರು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಸಿಂಗಾಪುರ ಗ್ರಾಮದ ಶೆಡ್ನಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಿರುವ ಅವರು ಕಾಫಿ ತೋಟದಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಮಗ ಅಂಧ. ಪತ್ನಿ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿದ್ದಾರೆ. ಇನ್ನದರೂ ಸರ್ಕಾರ ಇವರ ಮನೆಗೆ ಖುದ್ದು ಹೋಗಿ ಸಹಾಯ ಮಾಡಬೇಕಿದೆ .
Narendra Modi PMO India : Report Card Chief Minister of Karnataka Basavaraj Bommai R Ashoka Rajnath Singh Prajwal Revanna H D Devegowda Preetham J Gowda