Dakshina Kannada Truck Owners Association Mangalore

Dakshina Kannada Truck Owners Association Mangalore Contact information, map and directions, contact form, opening hours, services, ratings, photos, videos and announcements from Dakshina Kannada Truck Owners Association Mangalore, Travel and transport, Mangalore, Mangalore.

Permanently closed.
30/09/2021

03/09/2021

01/09/2021

ದಕ್ಷಿಣ ಕನ್ನಡ ಲಾರಿ ಮಾಲೀಕರ ಸಂಘದ ದೂರಿನ ಅನ್ವಯ ಮಾನ್ಯ ಜಿಲ್ಲಾಧಿಕಾರಿಗಳು ಓವರ್ ಲೋಡಿಂಗ್ ಮತ್ತು ಟೂ ಪಾಯಿಂಟ್  ಲೋಡಿಂಗ್ ನ ಕುರಿತಂತೆ ನಮ್ಮ ಮ...
23/08/2021

ದಕ್ಷಿಣ ಕನ್ನಡ ಲಾರಿ ಮಾಲೀಕರ ಸಂಘದ ದೂರಿನ ಅನ್ವಯ ಮಾನ್ಯ ಜಿಲ್ಲಾಧಿಕಾರಿಗಳು ಓವರ್ ಲೋಡಿಂಗ್ ಮತ್ತು ಟೂ ಪಾಯಿಂಟ್ ಲೋಡಿಂಗ್ ನ ಕುರಿತಂತೆ ನಮ್ಮ ಮನವಿಯನ್ನು ಸ್ವೀಕರಿಸಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳು ರಸ್ತೆ ಅಪಘಾತಗಳು ಸಾರ್ವಜನಿಕ ಆಸ್ತಿ ನಷ್ಟ ವಾಹನ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳು ರಸ್ತೆ ಸುರಕ್ಷತೆ ಕಾನೂನುಬದ್ಧ ಚಟುವಟಿಕೆಗಳು ಇದೆಲ್ಲದರ ವಿಚಾರವಾಗಿ ಸೂಕ್ಷ್ಮವಾಗಿ ತನಿಖೆ ನಡೆಸಿ ನಮ್ಮ ಮನವಿಯಂತೆ ಜಿಲ್ಲೆಯಾದ್ಯಂತ ಇನ್ನು ಮುಂದೆ ಯಾವುದೇ ಓವರ್ ಲೋಡಿಂಗ್ ಹಾಗೂ ಟು ಪಾಯಿಂಟ್ ಲೋಡಿಂಗ್ ಮಾಡದಂತೆ ಸುಪ್ರೀಂಕೋರ್ಟ್ ನ ಆದೇಶ 09-11-2005 w.p.no 136/2003ರ ಅನ್ವಯ ಆದೇಶ ಹೊರಡಿಸಿದ್ದು ಜಿಲ್ಲೆಯ ಎಲ್ಲ ಕಾರ್ಖಾನೆಗಳು. ಟ್ರಾನ್ಸ್ ಪೋರ್ಟರ್ ಗಳು.ಹಾಗೂ ನವಮಂಗಳೂರು ಬಂದರು ಪ್ರಾಧಿಕಾರ ಕ್ಕೆ ಆದೇಶಿಸಿದ್ದು ಇನ್ನು ಮುಂದೆ ಜಿಲ್ಲೆಯಲ್ಲಿ ಯಾವುದೇ ಅಧಿಕ ಭಾರ ಹೊತ್ತ ವಾಹನವು ಕಂಡುಬಂದಲ್ಲಿ ಅಂತಹ ವಾಹನಗಳನ್ನು ಆರ್ ಟಿಒ ಅಧಿಕಾರಿಗಳು ವಶಕ್ಕೆ ಪಡೆದು ಈ ಅಪರಾಧಕ್ಕೆ ಸಂಬಂಧಿಸಿದ ಲಾರಿ ಮಾಲೀಕ ಮತ್ತು ಚಾಲಕ ಹಾಗೂ ಸರಕಿನ ಮಾಲೀಕ ಮತ್ತು ಖರೀದಿದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶಿಸಿದ್ದಾರೆ

ದಿನಾಂಕ 23:08:21 ರಂದು ಹಾಸನ ಮಡಿಕೇರಿ ಇತ್ಯಾದಿ ಊರುಗಳಿಂದ ಕೆಲ ಲಾರಿಗಳು ಓವರ್ ಲೋಡಿಂಗ್ ಮಾಡಿಕೊಂಡು ಬರುತ್ತಿರುವ ಖಚಿತ ಮಾಹಿತಿಯೊಂದಿಗೆ ದಕ್ಷ...
23/08/2021

ದಿನಾಂಕ 23:08:21 ರಂದು ಹಾಸನ ಮಡಿಕೇರಿ ಇತ್ಯಾದಿ ಊರುಗಳಿಂದ ಕೆಲ ಲಾರಿಗಳು ಓವರ್ ಲೋಡಿಂಗ್ ಮಾಡಿಕೊಂಡು ಬರುತ್ತಿರುವ ಖಚಿತ ಮಾಹಿತಿಯೊಂದಿಗೆ ದಕ್ಷಿಣಕನ್ನಡ ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರು ಆರ್ ಟಿಒ ಅಧಿಕಾರಿ ಸಹಯೋಗದೊಂದಿಗೆ ಓವರ್ ಲೋಡಿಂಗ್ ಮಾಡಿಕೊಂಡು ಬಂದಂತಹ ಲಾರಿಗಳನ್ನು ತಡೆಹಿಡಿದು ಅಂತಹ ವಾಹನಗಳನ್ನು ಆರ್ ಟಿಒ ಅಧಿಕಾರಿಗಳಿಗೆ ಒಪ್ಪಿಸಲಾಗಿದ್ದು.ಹಾಗೆಯೆ ಎಂಸಿಎಫ್ ಹಿಂದುಸ್ಥಾನ್ ಹಾಗೂ ಮುಂತಾದ ಕಾರ್ಖಾನೆಗಳಿಂದ ಟೂ ಪಾಯಿಂಟ್ ಹಾಗೂ ಓವರ್ ಲೋಡಿಂಗ್ ವಿಚಾರವಾಗಿ ಸಂಘಕ್ಕೆ ದೂರು ಬಂದಿದ್ದು ಅದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿರುತ್ತಾರೆ ಹಾಗೆಯೇ ಆರ್ ಟಿಒ ಕಚೇರಿಯ ವತಿಯಿಂದ ದಕ್ಷಿಣ ಕನ್ನಡ ಲಾರಿ ಮಾಲಿಕರ ಸಂಘದ ಪರವಾಗಿ ಓವರ್ ಲೋಡಿಂಗ್ ಹಾಗೂ ಟೂ ಪಾಯಿಂಟ್ ಲೋಡಿಂಗ್ ವಿಚಾರದ ಕಾರ್ಯಾಚರಣೆಗೆ ಪ್ರತ್ಯೇಕ ವಾಹನವನ್ನು ಹಾಗೂ ಅಧಿಕಾರಿಗಳನ್ನು ನೇಮಿಸುವುದಾಗಿ ಆರ್ ಟಿಒ ಇಲಾಖೆ ತಿಳಿಸಿರುತ್ತದೆ.

20/08/2021

ಎಲ್ಲಾ ಚಾಲಕರು ಮತ್ತು ಮಾಲೀಕರಲ್ಲಿ ವಿನಂತಿ ಶಿರಾಡಿ ಹಾಗೂ ಸಕಲೇಶಪುರ ಘಾಟ್ ಗಳಲ್ಲಿ ಭಾರಿವಾಹನ ಸಂಚಾರ ನಿಷೇಧಿಸಿದ್ದು ಕಳೆದ 5ದಿನಗಳಿಂದ ಸುಮಾರು ಸಂಖ್ಯೆಯ ಲಾರಿಗಳು ಸ್ಥಳದಲ್ಲೇ ಬಾಕಿ ಯಾಗಿರುತ್ತದೆ ಈ ವಿಷಯದ ಕುರಿತು ದಕ್ಷಿಣ ಕನ್ನಡ ಲಾರಿ ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಯವರು ಸ್ಥಳಕ್ಕೆ ಭೇಟಿ ನೀಡಿ ಈ ಕುರಿತಾಗಿ ಅಧಿಕಾರಿಗಳೊಡನೆ ಚರ್ಚಿಸಿ ಬಾಕಿಯಾದ ಗಾಡಿಗಳನ್ನು ತೆರವುಗೊಳಿಸುತ್ತಾರ. ಹಾಗು ಪ್ರಸ್ತುತ ಹತ್ತು ಟನ್ ಭಾರ ಹೊಂದಿರುವ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದ್ದು ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶ ಬರುವವರೆಗೂ ಎಲ್ಲಾ ಘನ ವಾಹನಗಳಿಗು ಪ್ರವೇಶವನ್ನು ನಿರ್ಬಂಧಿಸಲಾಗಿದೆ ದಯಮಾಡಿ ಯಾವುದೇ ಚಾಲಕರು ಹಾಗೂ ಮಾಲೀಕರು ಈ ಮಾರ್ಗವಾಗಿ ತಮ್ಮ ವಾಹನಗಳನ್ನು ಸಂಚರಿಸಬಾರದೆಂದು ಈ ಮೂಲಕ ತಿಳಿಸಿರುತ್ತೇವೆ

16/08/2021
ದಿನಾಂಕ 16:08:21 ರಂದು 11.00AM.ಗೆ  ದಕ್ಷಿಣಕನ್ನಡ ಲಾರಿ ಓನರ್ಸ್ ಅಸೋಸಿಯೇಷನ್ ಹಾಗೂ ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್&ಏಜೆಂಟ್ಸ...
14/08/2021

ದಿನಾಂಕ 16:08:21 ರಂದು 11.00AM.ಗೆ ದಕ್ಷಿಣಕನ್ನಡ ಲಾರಿ ಓನರ್ಸ್ ಅಸೋಸಿಯೇಷನ್ ಹಾಗೂ ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್&ಏಜೆಂಟ್ಸ್ ಅಸೋಸಿಯೇಷನ್ ಇವರ ಸಹಕಾರದೊಂದಿಗೆ ವುಡ್ ಲ್ಯಾಂಡ್ಸ್ ಹೋಟೆಲ್ ಮಂಗಳೂರಿನಲ್ಲಿ ಎಲ್ಲಾ ಲಾರಿ ಮಾಲೀಕರ ಸಭೆ ಕರೆದಿದ್ದು ಈ ಕಾರ್ಯಕ್ರಮದಲ್ಲಿ ಸಂಘದ ನೂತನ ಆಡಳಿತ ಮಂಡಳಿ ಪ್ರಕಟಣೆ ಹಾಗೂ ಓವರ್ ಲೋಡ್ ಮತ್ತು ಟು ಪಾಯಿಂಟ್ ಲೋಡಿಂಗ್ ಕುರಿತಾದ ಅಭಿಯಾನ ಮತ್ತು ಲಾರಿ ಬಾಡಿಗೆ ದರ ನಿಗದಿ ಸಂಘದ ಸದಸ್ಯತ್ವ ಸ್ವೀಕಾರ ಮತ್ತು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾಗಿರುವ *ಜಿ ಆರ್ ಷಣ್ಮುಗಪ್ಪ* ಇವರು ಆಗಮಿಸಲಿದಾರೆ ಇವರೊಡನೆ ಪ್ರಸ್ತುತ ಅನೇಕ ವಿಚಾರವಾಗಿ ಸಮಾಲೋಚನೆ ನಡೆಸಲಿದ್ದು ಈ ಕಾರ್ಯಕ್ರಮಕ್ಕೆ ಎಲ್ಲಾ ಲಾರಿ ಮಾಲೀಕರು ಆಗಮಿಸಬೇಕಾಗಿ ತಮ್ಮಲ್ಲಿ ವಿನಂತಿಸಿ ಕೊಳ್ಳುತ್ತಿದ್ದೇವೆ ಹಾಗೂ ಅದೇ ದಿನ ಮಾಧ್ಯಮ ಮಿತ್ರರೊಡನೆ ಮಾಧ್ಯಮ ಸುದ್ದಿಗೋಷ್ಠಿಯನ್ನು ಸಹ ಆಯೋಜಿಸಲಾಗಿದೆ ಆದಕಾರಣ ಎಲ್ಲಾ ಲಾರಿ ಮಾಲೀಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ತಮ್ಮಲ್ಲಿ ವಿನಂತಿ

11/08/2021

ವಿಶೇಷ ಸೂಚನೆ :-

ದಿನಾಂಕ:- 12:08:21 ರಿಂದ 2ದಿನಗಳ ಕಾಲ ನೂತನ ಮುಖ್ಯಮಂತ್ರಿಗಳಾದ ಶ್ರೀಯುತ ಬಸವರಾಜ್ ಬೊಮ್ಮಾಯಿ ರವರು ಮಂಗಳೂರಿಗೆ ಆಗಮಿಸಲಿದ್ದು ಕರೋನಾ ನಿಯಂತ್ರಣದ ಬಗ್ಗೆ ಹಾಗೂ ಪ್ರಸ್ತುತ ಓವರ್ ಲೋಡ್ ನಿಷೇಧದ ವಿಚಾರವಾಗಿ ವಿಶೇಷ ಕ್ರಮ ಕೈಗೊಳ್ಳಲಿದ್ದು ಈ ವಿಚಾರವಾಗಿ ಪ್ರಸ್ತಾಪಿಸಿರುತ್ತಾರೆ ಆದಕಾರಣ ದಯಮಾಡಿ ಯಾವುದೇ ಕಾರಣಕ್ಕೂ ಲಾರಿ ಮಾಲೀಕರು ಮಂಗಳೂರಿನಿಂದ ಓವರ್ ಲೋಡ್ ಮಾಡಬಾರದೆಂದು ಈ ಮೂಲಕ ವಿಷಾದಿಸುತ್ತೇವೆ ಮತ್ತು ನಮ್ಮ ಸಂಘದ ವತಿಯಿಂದ ಕರ್ನಾಟಕದ ಹಲವು ಜಿಲ್ಲಾ ಲಾರಿ ಮಾಲೀಕರ ಸಂಘ ವನ್ನು ಸಂಪರ್ಕಿಸಿ ಓವರ್ ಲೋಡ್ ಕುರಿತಾಗಿ ಚರ್ಚಿಸಿ ಓವರ್ ಲೋಡ್ ಅನ್ನು ನಿರ್ಬಂಧಿಸಿರುತ್ತಾರೆ. ಒಂದುವೇಳೆ ಓವರ್ ಲೋಡ್ ಮಾಡಿ ಕೊಂಡು ಸಂಚರಿಸುವ ಯಾವುದೇ ಲಾರಿ ಕಂಡುಬಂದಲ್ಲಿ ಅದನ್ನು ತಡೆಹಿಡಿದು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಜಿಲ್ಲೆಯ ಮತ್ತು ರಾಜ್ಯದ ಎಲ್ಲಾ ಲಾರಿ ಮಾಲೀಕರಿಗೆ ಈ ಮೂಲಕ ಮಂಗಳೂರಿನಿಂದ ಹಾಗೂ ಇತರೆ ಸ್ಥಳಗಳಿಂದ ಓವರ್ ಲೋಡ್ ಅನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಈ ಮೂಲಕ ದಕ್ಷಿಣ ಕನ್ನಡ ಲಾರಿ ಮಾಲೀಕರ ಸಂಘದ ವತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ.

ದಕ್ಷಿಣ ಕನ್ನಡ ಲಾರಿ ಮಾಲೀಕರ ಸಂಘದ ನೂತನ ಗೌರವಾಧ್ಯಕ್ಷರಾಗಿ ಸೇರ್ಪಡೆಯಾಗಿರುವ ಶ್ರೀಯುತ ಸುಜಿತ್ ಆಳ್ವ ಮಾಲೀಕರು ಆದಿನಾಥೇಶ್ವರ ರೋಡ್ ಲೈನ್ಸ್ ಇವ...
11/08/2021

ದಕ್ಷಿಣ ಕನ್ನಡ ಲಾರಿ ಮಾಲೀಕರ ಸಂಘದ ನೂತನ ಗೌರವಾಧ್ಯಕ್ಷರಾಗಿ ಸೇರ್ಪಡೆಯಾಗಿರುವ ಶ್ರೀಯುತ ಸುಜಿತ್ ಆಳ್ವ ಮಾಲೀಕರು ಆದಿನಾಥೇಶ್ವರ ರೋಡ್ ಲೈನ್ಸ್ ಇವರಿಗೆ ಸಂಘದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

Address

Mangalore
Mangalore, TAS
7030

Website

Alerts

Be the first to know and let us send you an email when Dakshina Kannada Truck Owners Association Mangalore posts news and promotions. Your email address will not be used for any other purpose, and you can unsubscribe at any time.

Share