13/05/2018
#ಪ್ರಿಯರೇ...
ಬೇಸಗೆಯ ಅಡ್ಡಮಳೆಗಳು ಹೊಡೆಯುವ ಕಾಲವಿದು. ಪ್ರತಿನಿತ್ಯ ಸಿಡಿಲಿಗೆ ಬಲಿಯಾದ, ಮರ ಮುರಿದು ಬಿದ್ದು ದುರ್ಘಟನೆಯಲ್ಲ ಸಿಲುಕಿದವರ, ಗೋಡೆ ಕುಸಿದು ಪ್ರಾಣ ಕಳೆದುಕೊಂಡವರ ಸುದ್ದಿಗಳನ್ನು ಕೇಳುತ್ತೇವೆ/ ನೋಡುತ್ತೇವೆ..
:ಮಳೆ ಎಷ್ಟಾದರೂ ಬರಲಿ. ಸಿಡಿಲು, ಬಿರುಗಾಳಿ ಬದುಕುಗಳನ್ನು ಕಿತ್ತುಕೊಳ್ಳದಿರಲಿ ಎಂಬುದೇನೋ ನಮ್ಮ ಆಶಯ. ಆದರೆ ನಾವು ಅಂದುಕೊಂಡಿದ್ದೆಲ್ಲ ಆಗೋದಿಲ್ಲವಲ್ಲ! ಹಾಗಾಗಿ ನಮ್ಮ ಎಚ್ಚರ ನಾವು ವಹಿಸುವುದು ಅಗತ್ಯ. ಸಿಡಿಲು, ಮಿಂಚು, ಗಾಳಿ ಇರುವ ಹೊತ್ತು ಮೊಬೈಲ್ ಬಳಕೆ, ಮರದ ಕೆಳಗೆ ನಿಲ್ಲೋದು, ಭಂಡ ಧೈರ್ಯ ಮಾಡಿ ಹೊರಗೆ ಓಡಾಡೋದು, ಸಿಡಿಲು ಮಿಂಚನ್ನು ಮೊಬೈಲಿನಲ್ಲಿ ಚಿತ್ರಿಸೋದು, ಅನಗತ್ಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸೋದು ಮಾಡಬಾರದು
#ಕಾರುಗಳನ್ನು_ಯಾವುದೇ_ಕಾರಣಕ್ಕೂ_ಮರದ #ಕೆಳಗೆ_ನಿಲ್ಲಿಸಬೇಡಿ. ಬೇರೆ ಸಾಧ್ಯತೆಗಳು ಇಲ್ಲದಾಗಲೂ ಕಾರನ್ನು ನಿಲ್ಲಿಸಿ ಸುರಕ್ಷಿತ ಜಾಗಗಳಲ್ಲಿ ವಿಶ್ರಾಂತಿ ಪಡೆಯಿರಿ.
ಇಲೆಕ್ಟ್ರಾನಿಕ್ ವಸ್ತುಗಳನ್ನು ಅನ್ ಪ್ಲಗ್ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳನ್ನು ಆಡಲು, ಗಾಳಿಗುದುರಿದ ಮಾವು ಆರಿಸಲು, ಅಲಿಕಲ್ಲು ಆರಿಸಲು ಇತ್ಯಾದಿ ಕಳಿಸಕೂಡದು. ಹೊರಗೆ ಹೋಗಿದ್ದ ಮಕ್ಕಳನ್ನು ಸುರಕ್ಷಿತ ಜಾಗಕ್ಕೆ ತಲುಪಿಸೋದು, ತಮ್ಮ ಕುರಿ, ಎತ್ತು ಎಮ್ಮೆ ಇತ್ಯಾದಿ ಸಾಕುಪ್ರಾಣಿಗಳನ್ನು ಸುರಕ್ಷಿತ ಎನಿಸುವ ತಾಣಕ್ಕೆ ಸೇರಿಸೋದು ಇತ್ಯಾದಿ ಕ್ಷಿಪ್ರಗತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಜಾಗ್ರತೆವಹಿಸಬೇಕು.. ವಹಿಸ್ತೀರಲ್ವಾ?
ಕಾದಂಬಿನಿ ರಾವಿ
*ಪ್ರಕಟಣೆ:*
#ಬೃಹತ್_ಬೆಂಗಳೂರು_ಟ್ಯಾಕ್ಸಿ_ಚಾಲಕರ #ಯೂನಿಯನ್_(ರಿ).
(ಬಿಬಿಟಿಡಿಯು)
#ಕರ್ನಾಟಕ_ಪ್ರಜಾರಂಗ.